ಭಟ್ಕಳ: 14 ಅಡಿ ಉದ್ದದ ಹೆಬ್ಬಾವು ಪತ್ತೆ! - Bhatkal python news
ಭಟ್ಕಳ ತಾಲೂಕಿನ ಬೈಲೂರು ಪಂಚಾಯತ್ ವ್ಯಾಪ್ತಿಯ ಮಡಿಕೇರಿಯ ಭಾಸ್ಕರ್ ಕಾಮತ್ ಎನ್ನುವವರ ಮನೆಯಂಗಳದಲ್ಲಿ ಸುಮಾರು 14 ಅಡಿ ಉದ್ದದ 25ರಿಂದ 30 ಕೆಜಿಗೂ ಅಧಿಕ ತೂಕವಿರುವ ಹೆಬ್ಬಾವೊಂದು ಪತ್ತೆಯಾಗಿದ್ದು, ಅರಣ್ಯ ಇಲಾಖೆಯವರು ಸೆರೆ ಹಿಡಿದಿದ್ದಾರೆ. ಮನೆಯಂಗಳದಲ್ಲಿ ನೋಡಿದ ಈ ಬೃಹದಾಕಾರದ ಹಾವನ್ನು ರಕ್ಷಿಸುವಂತೆ ಸಮೀಪದ ಮುರ್ಡೇಶ್ವರ ನಾಖದಲ್ಲಿರುವ ಅರಣ್ಯ ಇಲಾಖೆಯ ಶಾಖೆಗೆ ದೂರವಾಣಿಯ ಮೂಲಕ ಸಂಪರ್ಕಿಸಿದಾಗ, ಆ ಭಾಗ ನಮ್ಮ ವ್ಯಾಪ್ತಿಗೆ ಬರುವುದಿಲ್ಲ ಎಂದು ಹಿರಿಯ ಫಾರೆಸ್ಟ್ ಸಿಬ್ಬಂದಿಯೋರ್ವರು ತಮ್ಮ ಕರ್ತವ್ಯದಿಂದ ನುಣುಚಿಕೊಂಡಿದ್ದಾರೆ ಎನ್ನಲಾಗಿದೆ. ಬಳಿಕ ಮಂಕಿ ಭಾಗದ ಹಿರಿಯ ಅಧಿಕಾರಿಗಳಾದ ಎಂ.ಎಂ.ಮಡ್ಡಿಯವರ ಮಾರ್ಗದರ್ಶನದಲ್ಲಿ ಫಾರೆಸ್ಟ್ ಗಾರ್ಡ್ ದೇವೇಂದ್ರ ಗೊಂಡ, ಉರಗ ಪ್ರೇಮಿ ಉದಯ ನಾಯ್ಕ ಹಾಗೂ ಡ್ರೈವರ್ ಗೋಪಾಲ ಗೌಡ ನೇತೃತ್ವದ ತಂಡವೊಂದು ಸ್ಥಳಕ್ಕೆ ಧಾವಿಸಿದೆ. ಸ್ಥಳೀಯರ ಸಹಕಾರದೊಂದಿಗೆ ಹಾವನ್ನು ಹಿಡಿದು ಸುರಕ್ಷಿತವಾಗಿ ಅರಣ್ಯ ಪ್ರದೇಶದಲ್ಲಿ ಬಿಡಲಾಗಿದೆ.