ದೊಡ್ಡಗಾತ್ರದ ಬಲೂನ್ ನೋಡಿ ಬೆಸ್ತು ಬಿದ್ದ ಉಡುಪಿ ಜನ, ಅಷ್ಟಕ್ಕೂ ಇದೇನು? - ಉಡುಪಿಯಲ್ಲಿ ದೊಡ್ಡಗಾತ್ರದ ಬಲೂನ್ ಸುದ್ದಿ
ತೋಟದಲ್ಲಿ ಬಂದು ಬಿದ್ದ ದೊಡ್ಡ ಗಾತ್ರದ, ಚಿಪ್ ಆಧಾರಿತ ಬಲೂನ್ ನೋಡಿ ಜನ ಬೆಸ್ತು ಬಿದ್ದ ಘಟನೆ ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನಲ್ಲಿ ನಡೆದಿದೆ. ಕಾರ್ಕಳ ತಾಲೂಕಿನ ಬೋಳ ಗ್ರಾಮದಲ್ಲಿ ಕಿಶೋರ್ ಮೂಲ್ಯ ಎಂಬವರ ಮನೆಯ ತೋಟದಲ್ಲಿ ಚಿಪ್ ಒಳಗೊಂಡ ಸಣ್ಣ ಉಪಕರಣದ ಜೊತೆ ದೊಡ್ಡ ಗಾತ್ರದ ಬಲೂನೊಂದು ನೇತಾಡುವ ಸ್ಥಿತಿಯಲ್ಲಿ ಪತ್ತೆಯಾಗಿದೆ. ಇದರಿಂದ ಮನೆ ಮಂದಿ ಭಯಭೀತರಾಗಿ ಕೂಡಲೇ ಪೋಲೀಸ್ ಇಲಾಖೆಗೆ ಹಾಗೂ ಕಂದಾಯ ಅಧಿಕಾರಿಗಳಿಗೆ ವಿಷಯ ತಿಳಿಸಿದ್ದಾರೆ. ನಂತರ ಸ್ಥಳಕ್ಕೆ ಬಂದ ಅಧಿಕಾರಿಗಳು ಇದರ ಬಗ್ಗೆ ಅರಿವು ಮೂಡಿಸಿದ್ದಾರೆ.