ಭೀಕರ ಮಳೆಗೆ ರಾಜ್ಯವೇ ಮುಳುಗಿರುವಾಗ ಈ ಜಿಲ್ಲೆಯಲ್ಲಿ ಮಾತ್ರ ಮಳೆಯೇ ಇಲ್ಲ! - ಬೀದರ್ ಸುದ್ದಿ
ಬೀದರ್: ರಾಜ್ಯದ ಬಹುತೇಕ ಭಾಗಗಳಲ್ಲಿ ಜೀವನದಿಗಳು ಅಪಾಯದ ಮಟ್ಟ ಮೀರಿ ಹರಿದು ಜನಜೀವನ ಬೀದಿಪಾಲು ಮಾಡಿ ಆರ್ಭಟಿಸಿದರೆ, ಗಡಿ ಜಿಲ್ಲೆ ಬೀದರ್ನಲ್ಲಿ ಜೀವನದಿಗಳು ಬತ್ತಿ ಹೋಗಿ ಜನರು ಹನಿ ನೀರಿಗಾಗಿ ಪರದಾಡುವ ಭಯಂಕರ ಬರಗಾಲದ ಸ್ಥಿತಿ ಎದುರಾಗಿದೆ. ಜಿಲ್ಲೆಯಲ್ಲಿ ಕಳೆದ ನಾಲ್ಕು ವರ್ಷಗಳಿಂದ ಸಕಾಲಕ್ಕೆ ಮಳೆಯಾಗದೆ ಹಳ್ಳ, ಕೆರೆಕಟ್ಟೆ, ಬಾಂದಾರು ಸೇತುವೆಗಳು ನೀರಿಲ್ಲದೆ ಖಾಲಿ ಖಾಲಿ ಹೊಡೆಯುತ್ತಿದ್ದು, ಜಿಲ್ಲೆಯ ಏಕೈಕ ಜೀವನದಿ ಮಾಂಜ್ರಾ ಕೂಡ ಮಳೆಗಾಲದಲ್ಲೇ ಬತ್ತಿ ಹೊಗಿ ಭಣಗುಡುತ್ತಿದೆ.