ಗವರ್ನರ್ ಮನೆ ಬಾಗಿಲು ಏಕೆ ತಟ್ಟುತ್ತಿದ್ದೀರಾ.. ಸರ್ಕಾರದ ವಿರುದ್ಧ ಜೆಡಿಎಸ್‌ನ ಎಂಎಲ್‌ಸಿ ಭೋಜೇಗೌಡ ಕಿಡಿ - ಚಿಕ್ಕಮಗಳೂರು ಲೇಟೆಸ್ಟ್ ನ್ಯೂಸ್
ಇಷ್ಟು ಬೆಡ್ ಬೇಕು ಎಂದು ಖಾಸಗಿ ಆಸ್ಪತ್ರೆಯಿಂದ ಪಡೆಯಿರಿ. ಅದನ್ನು ಬಿಟ್ಟು ಜನರನ್ನು ಬೀದಿಯಲ್ಲಿ ಸಾಯಿಸುತ್ತಿದ್ದೀರಾ. ಎರಡನೇ ಅಲೆ ಎದುರಿಸಲು ಯಾವುದೇ ಪೂರ್ವ ಸಿದ್ಧತೆ ಮಾಡಿಕೊಂಡಿಲ್ಲ. ಸರ್ಕಾರ ಸತ್ತು ಹೋಗಿದೆ. ಬುದ್ಧಿ ಇಲ್ಲದೇ ಆರೋಗ್ಯ ಸಚಿವರಾಗಿದ್ದೀರಾ, ಮೂರು ಜನ ಉಪ ಮುಖ್ಯಮಂತ್ರಿಗಳಿದ್ದೀರಾ, ಏಕೆ ಸೂಕ್ತ ಕ್ರಮಕೈಗೊಳ್ಳಲು ಆಗುತ್ತಿಲ್ಲ..