ರಾಯಣ್ಣನನ್ನ ನಡುರಸ್ತೆಯಲ್ಲಿ ನಿಲ್ಲಿಸಿದವರು ಬಿಎಸ್ವೈ ಬಗ್ಗೆ ಮಾತನಾಡ್ತಾರೆ.. ಭೀಮಾಶಂಕರ್ ಪಾಟೀಲ್ ಕಿಡಿ - Bhimashankar Patil, Vice President of BJP Yuvamorcha State
ದಾವಣಗೆರೆ:ಸಂಗೊಳ್ಳಿ ರಾಯಣ್ಣನನ್ನ ನಡು ರಸ್ತೆಯಲ್ಲಿ ನಿಲ್ಲಿಸಿದವರು ಯಡಿಯೂರಪ್ಪನವರ ಬಗ್ಗೆ ಮಾತನಾಡುತ್ತಾರೆ. ಜನರಿಗೆ ಟೊಳ್ಳು ಯಾರು, ಗಟ್ಟಿ ಯಾರು ಎಂದು ಗೊತ್ತಿದೆ. ಬಿಎಸ್ವೈ ವಿಷಯಕ್ಕೆ ಬಂದರೆ ಸುಟ್ಟು ಭಸ್ಮ ಆಗುತ್ತೀರಿ ಎಂದು ಪರೋಕ್ಷವಾಗಿ ಕೆ ಎಸ್ ಈಶ್ವರಪ್ಪ ವಿರುದ್ಧ ಬಿಜೆಪಿ ಯುವಮೋರ್ಚಾ ರಾಜ್ಯ ಉಪಾಧ್ಯಕ್ಷ ಭೀಮಾಶಂಕರ್ ಪಾಟೀಲ್ ಕಿಡಿಕಾರಿದ್ದಾರೆ. ಸಿಎಂ ಅವರ ಆಡಳಿತ ವಿಚಾರದಲ್ಲಿ ಮೂಗು ತೂರಿಸಿ, ಅವರಿಗೆ ಭಂಗ ತರುತ್ತಿದ್ದಾರೆ. ಧರ್ಮ ಕಾಪಾಡಿದವರು ಯಡಿಯೂರಪ್ಪ, ಅವರಿಗೆ ಭಂಗ ತರುವ ಕೆಲಸ ಮಾಡುತ್ತಿದ್ದಾರೆ. ಬಿಎಸ್ವೈ ವಿರುದ್ಧ ತೊಡೆ ತಟ್ಟಿದ್ರೆ ನಾವೂ ತೊಡೆತಟ್ಟಲು ರೆಡಿ ಇದ್ದೇವೆ. ಜಿಲ್ಲಾ ಪಂಚಾಯತ್ನಲ್ಲಿ ಅವರ ಮಗ ಗೆಲ್ಲಲು ಬಿಎಸ್ವೈ ಪ್ರಚಾರಕ್ಕೆ ಬರಬೇಕಾಯಿತು. ಇಂತವರಿಂದ ಬಿಜೆಪಿ ಹೇಗೆ ಉಳಿಯುತ್ತೆ. ಇದನ್ನು ಹೈಕಮಾಂಡ್ ಅರ್ಥ ಮಾಡಿಕೊಳ್ಳಬೇಕು ಎಂದರು.