ಮಂದಿರ ನಿರ್ಮಾಣ ಕುರಿತ ಹಾಡಿಗೆ ಪೋಲಿಸರ ವಿರೋಧ: ನಿಮಜ್ಜನ ನಿಲ್ಲಿಸಿ ಪ್ರತಿಭಟನೆ - Chitradurga district latest news
ಚಿತ್ರದುರ್ಗ ಜಿಲ್ಲೆಯ ಭರಮಸಾಗರ ಪಟ್ಟಣದಲ್ಲಿ ಬಜರಂಗ ದಳ ಮತ್ತು ಹಿಂದೂ ಯುವಕರ ಸಂಘಟನೆಗಳ ನೇತೃತ್ವದಲ್ಲಿ ಪ್ರತಿಷ್ಠಾಪಿಸಿದ್ದ ಹಿಂದೂ ಮಹಾಗಣಪತಿ ನಿಮಜ್ಜನ ಮೆರವಣಿಗೆ ವೇಳೆ ಡಿಜೆ ಸೌಂಡ್ಸ್ ನಲ್ಲಿ ಬನಾಯೆಂಗೆ ಮಂದಿರ್ ಹಾಡು ಪ್ರಸಾರ ಮಾಡಲಾಗಿತ್ತು. ಇದಕ್ಕೆ ವಿರೋಧ ವ್ಯಕ್ತಪಡಿಸಿದ ಪೊಲೀಸರು ಪ್ರಸಾರ ಮಾಡದಂತೆ ಎಚ್ಚರಿಕೆ ನೀಡಿದ್ದಾರೆ. ಇದರಿಂದ ಆವೇಶಗೊಂಡ ಯುವಕರು ನಿಮಜ್ಜನ ಸ್ಥಗಿತಗೊಳಿಸಿ ಪ್ರತಿಭಟನೆಗೆ ಮುಂದಾಗಿ ಆಕ್ರೋಶ ವ್ಯಕ್ತಪಡಿಸಿದರು. ಮಾಹಿತಿ ತಿಳಿದು ಹೊಳಲ್ಕೆರೆ ಶಾಸಕ ಎಂ. ಚಂದ್ರಪ್ಪ ಸ್ಥಳಕ್ಕೆ ಭೇಟಿ ನೀಡಿ ಪರಿಸ್ಥಿತಿ ತಿಳಿಗೊಳಿಸಿದರು.