ಪ್ರಧಾನಿ ಮೋದಿಗೆ ತಾಕತ್ತಿದ್ದರೆ ಬುದ್ಧನ ದೇವಸ್ಥಾನ ಕಟ್ಟಲಿ: ಚಿಂತಕ ಭಗವಾನ್ ಪ್ರಶ್ನೆ
ಮೈಸೂರು: ಪ್ರಧಾನಿ ಮೋದಿ ಅವರಿಗೆ ತಾಕತ್ತಿದ್ದರೆ, ಭಾರತದಲ್ಲಿ ಬುದ್ಧನ ದೇವಸ್ಥಾನ ಕಟ್ಟಲಿ ಎಂದು ಪ್ರಗತಿಪರ ಚಿಂತಕ ಪ್ರೊ.ಕೆ.ಎಸ್.ಭಗವಾನ್ ಸವಾಲು ಹಾಕಿದ್ದಾರೆ. ಜಿಲ್ಲಾ ಪತ್ರಕರ್ತರ ಸಂಘದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಧಾನಿ ಮೋದಿ ಶುಕ್ರವಾರ ವಿಶ್ವಸಂಸ್ಥೆಯಲ್ಲಿ ಮಾತನಾಡಿ ಬುದ್ಧ ಬೇಕು ಯುದ್ಧ ಬೇಡ ಅಂತ ಹೇಳಿದ್ದಾರೆ. ಅವರ್ಯಾಕೆ ರಾಮನ ಭೂಮಿಯಿಂದ ಬಂದಿದ್ದೇನೆ ಅಂತ ಹೇಳಲಿಲ್ಲ ಎಂದು ಪ್ರಶ್ನಿಸಿದರು. ಮನುಸ್ಮೃತಿಯಲ್ಲಿ ಬ್ರಾಹ್ಮಣ ಸೇವೆ ಮಾಡೋರು ಗುಲಾಮರು ಅಂತ ಹೇಳಿದೆ. ನಿನ್ನೆ ಅಂತದ್ದೇ ಗುಲಾಮರು ವೇದಿಕೆ ಕಿತ್ತು ಹಾಕಿದ್ದಾರೆ, ಪೊಲೀಸರಿಗೆ ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾರೆ ಎಂದು ಪ್ರತಾಪಸಿಂಹರ ಹೆಸರು ಹೇಳದೆ ಕುಟುಕಿದರು.