ಎಫ್ಬಿ ಪೋಸ್ಟ್ ಕಿಡಿಗೆ ಹೊತ್ತಿ ಉರಿದ ಬೆಂಗಳೂರು - ವಿಡಿಯೋ - Bengaluru riot
ಬೆಂಗಳೂರು: ಕೆ.ಜಿ. ಹಳ್ಳಿ, ಡಿ.ಜೆ. ಹಳ್ಳಿಯಲ್ಲಿ ಕಿಡಿಗೇಡಿಗಳು ನಡೆಸಿದ ದಾಂಧಲೆಗೆ ಇಡೀ ರಾಜ್ಯವೇ ಬೆಚ್ಚಿ ಬಿದ್ದಿದೆ. ಕಾನೂನನ್ನು ಕೈಗೆತ್ತಿಕೊಳ್ಳಬೇಡಿ, ತಪ್ಪಿತಸ್ಥರ ವಿರುದ್ಧ ಕಾನೂನು ಪ್ರಕಾರ ಕ್ರಮ ಕೈಗೊಳ್ಳೋಣ ಎಂದು ಪೊಲೀಸರು ಎಷ್ಟೇ ಮನವಿ ಮಾಡಿದರೂ ಕಿಡಿಗೇಡಿಗಳು ಕೇಳಲಿಲ್ಲ. ಕ್ಷಣಾರ್ಧದಲ್ಲೇ ಪರಿಸ್ಥಿತಿ ಕೈಮೀರಿ ಹೋಗಿತ್ತು. ಕಿಡಿಗೇಡಿಗಳು ಸಿಕ್ಕ ಸಿಕ್ಕ ವಾಹನಗಳಿಗೆ ಬೆಂಕಿ ಹಚ್ಚಿದರು. ಹಲವಾರು ವಾಹನಗಳು ಸುಟ್ಟು ಭಸ್ಮವಾದವು. ದ್ವಿಚಕ್ರ ವಾಹನಗಳು, ಹಲವಾರು ಮನೆಗಳು ಹಾನಿಗೊಳಗಾದವು. ಗಲಭೆಗೆ ಬೆಂಗಳೂರು ತತ್ತರಿಸಿ ಹೋಯಿತು. ಈ ವಿಡಿಯೋ ಹಿಂಸಾಚಾರದ ಭೀಕರತೆಯನ್ನು ತೆರೆದಿಡುತ್ತಿದೆ.
Last Updated : Aug 12, 2020, 3:43 PM IST