ಕೋವಿಡ್ ಭೀತಿ: ವೀಕೆಂಡ್ ದಿನವೂ ಮಾಲ್ಗಳತ್ತ ಸುಳಿಯದ ಬೆಂಗಳೂರು ಮಂದಿ - Bangalore malls are empty on weekends
ಬೆಂಗಳೂರು: ವೀಕೆಂಡ್ ಬಂದ್ರೆ ಸಾಕು ಸಿಲಿಕಾನ್ ಸಿಟಿ ಮಂದಿ ಮಾಲ್ಗಳಿಗೆ ತೆರಳಿ ದಿನ ಕಳೆಯುತ್ತಿದ್ದರು. ಲಾಕ್ ಡೌನ್ ಸಮಯದಲ್ಲಿ ಬಂದ್ ಆಗಿದ್ದ ಮಾಲ್ಗಳು ಇದೀಗ ತೆರೆದಿವೆ. ಆದರೆ, ಜನ ಮಾತ್ರ ಕೋವಿಡ್ ಭೀತಿಯಿಂದ ಮಾಲ್ಗಳತ್ತ ಸುಳಿಯುತ್ತಿಲ್ಲ. ಹೀಗಾಗಿ ಭಾನುವಾರವೂ ಜನರಿಲ್ಲದೆ ಮಾಲ್ಗಳು ಬಿಕೋ ಎನ್ನುತ್ತಿವೆ. ಜೊತೆಗೆ ಮಾಲ್ಗಳ ಬಳಿ ಇರುತ್ತಿದ್ದ ಆಟೋ ಚಾಲಕರ ವ್ಯವಹಾರಕ್ಕೂ ದೊಡ್ಡ ಹೊಡೆತ ಬಿದ್ದಿದೆ.