ಜೊತೆಯಲ್ಲಿದ್ದ ಎತ್ತು ಸಾವು: ಮನಕಲಕುವಂತಿದೆ ಮತ್ತೊಂದು ಎತ್ತಿನ ಮೂಕವೇದನೆ - ox death news
ಅನಾರೋಗ್ಯದಿಂದ ಎತ್ತು ಅಸುನೀಗಿದ್ದು, ಮತ್ತೊಂದು ಜೊತೆಗಾರ ಎತ್ತು ಮೂಕರೋದನೆ ವ್ಯಕ್ತಪಡಿಸಿರುವ ಘಟನೆ ಮದ್ದೂರು ತಾಲೂಕಿನ ಅರೇಚಾಕನಹಳ್ಳಿಯಲ್ಲಿ ನಡೆದಿದೆ. ಗ್ರಾಮದ ಸತೀಶ್ ಎಂಬುವವರಿಗೆ ಸೇರಿದ ಜೋಡೆತ್ತುಗಳಲ್ಲಿ ಒಂದು ಎತ್ತು ಸಾವನ್ನಪ್ಪಿದ್ದು, ಮತ್ತೊಂದು ಎತ್ತು ಇದೀಗ ಒಬ್ಬಂಟಿಯಾಗಿದೆ. ಮೃತ ಎತ್ತಿಗೆ 15 ದಿನಗಳಿಂದ ಆರೋಗ್ಯದಲ್ಲಿ ಏರುಪೇರಾಗಿತ್ತು. ಮೂರ್ನಾಲ್ಕು ದಿನಗಳಿಂದ ಆಹಾರ ತ್ಯಜಿಸಿದ್ದು, ಇಂದು ಬೆಳಗ್ಗೆ ಮೃತಪಟ್ಟಿದೆ. ದಶಕಗಳಿಂದ ಜೊತೆಯಾಗಿದ್ದ ಎತ್ತನ್ನು ಕಳೆದುಕೊಂಡು ಮತ್ತೊಂದು ಎತ್ತು ನರಳುತ್ತಿದೆ.