ನಡುಗಡ್ಡೆಯಲ್ಲಿ ಸಿಲುಕಿದ್ದ ಐವರ ರಕ್ಷಣೆ... ಅಲ್ಲೇ ಉಳಿದ ಕುರಿಗಳಿಗಾಗಿ ಮರುಗಿದ ಕುರಿಗಾಹಿಗಳು! - ಬಳ್ಳಾರಿ ಜಿಲ್ಲೆಯ ಪ್ರವಾಹ
ಬಳ್ಳಾರಿ ಜಿಲ್ಲೆಯ ರೈತರ ಜೀವನಾಡಿಯಾಗಿರುವ ತುಂಗಭದ್ರಾ ಜಲಾಶಯದಲ್ಲಿ ಭಾರಿ ಪ್ರಮಾಣದಲ್ಲಿ ಒಳಹರಿವು ಹೆಚ್ಚಾಗಿದೆ. ಅಂದಾಜು 1.50 ಲಕ್ಷ ಕ್ಯೂಸೆಕ್ ನೀರನ್ನು ನದಿಗೆ ಹರಿಬಿಟ್ಟಿದ್ದರಿಂದ ಸಿರುಗುಪ್ಪ ತಾಲೂಕಿನ ಬಾಗೇವಾಡಿ ಗ್ರಾಮದ ಉಪ್ಪಳಗಡ್ಡೆಯ ನಡುಗಡ್ಡೆಯಲ್ಲಿ ಸಿಲುಕಿಕೊಂಡಿದ್ದ ಐವರು ಕುರಿಗಾಹಿಗಳನ್ನು ಬೋಟ್ ಹಾಗೂ ತೆಪ್ಪಗಳ ಸಹಾಯದಿಂದ ರಕ್ಷಣೆ ಮಾಡಲಾಗಿದೆ. ಆದರೆ ಅಲ್ಲೇ ಉಳಿದಿರುವ ಕುರಿಗಳ ಕಥೆ ಏನು ಎಂಬುದು ನಡುಗಡ್ಡೆಯಿಂದ ಹೊರಬಂದ ಕುರಿಗಾಹಿಗಳ ಅಳಲಾಗಿದೆ.