ಹಾಗೆ ಸುಮ್ಮನೆ ಓಡಾಡಿದ್ದಕ್ಕೆ 100 ಬಸ್ಕಿ ಶಿಕ್ಷೆ; ಸವಾರರ ಕೈಯಲ್ಲಿ ಲಾಟಿ ಕೊಟ್ಟ ಪೊಲೀಸಮ್ಮ ಹೇಳಿದ್ದಿಷ್ಟು.. - ಬಳ್ಳಾರಿಯಲ್ಲಿ ವಾಹನ ಸವಾರರಿಂದಲೇ ಡ್ಯೂಟಿ ಮಾಡಿಸಿದ ಪೊಲೀಸರು
ಬಳ್ಳಾರಿಯಲ್ಲಿ ಲಾಕ್ಡೌನ್ ನಿಯಮ ಉಲ್ಲಂಘಿಸಿ ಇಷ್ಟ ಬಂದ ರೀತಿಯಲ್ಲಿ ಸಂಚರಿಸುತ್ತಿದ್ದ ಬೈಕ್ ಸವಾರರನ್ನು ಪೊಲೀಸರು ತಡೆದಿದ್ದಾರೆ. ಈ ವೇಳೆ ಗಾಂಧಿನಗರ ಪೊಲೀಸ್ ಠಾಣೆಯ ಸಿಪಿಐ ಗಾಯತ್ರಿ ರೊದ್ದಂ ಸವಾರರ ಕೈಯಲ್ಲಿ ಲಾಠಿ ಕೊಟ್ಟು, ಬನ್ನಿ ನಮ್ಮ ಡ್ಯೂಟಿ ನೀವ್ ಮಾಡ್ರಿ, ಆಗ ಗೊತ್ತಾಗುತ್ತೆ ಕಷ್ಟ ಏನೂ ಅನ್ನೋದು.. ಎಂದು ತರಾಟೆಗೆ ತೆಗೆದುಕೊಂಡರು. ಕುರುಗೋಡು ಪಟ್ಟಣದಲ್ಲಿ ಸುಮ್ಮನೆ ಬೈಕ್ ಚಲಾಯಿಸಿಕೊಂಡು ಹೊರಗಡೆ ಓಡಾಡುತ್ತಿದ್ದ ಹತ್ತಾರು ಯುವಕರ ಗುಂಪೊಂದಕ್ಕೆ ಪೊಲೀಸರು 100 ಬಸ್ಕಿ ಹೊಡೆಸಿ ಎಚ್ಚರಿಕೆ ನೀಡಿ ಕಳಿಸಿದ್ದಾರೆ.