ಅದ್ದೂರಿಯಾಗಿ ಜರುಗಿದ ಕೃಷಿಧಾನ್ಯ ಹಾಗೂ ಪಾರಂಪರಿಕ ಕೃಷಿ ಪದ್ಧತಿ ಪ್ರದರ್ಶನ
ಬಳ್ಳಾರಿ: ಕೃಷಿ ಇಲಾಖೆಯಿಂದ ಸಿರಿಧಾನ್ಯ ಹಾಗೂ ಪಾರಂಪರಿಕ ಕೃಷಿ ಪದ್ಧತಿ ಪ್ರದರ್ಶನವು ಗಣಿ ಜಿಲ್ಲೆಯಲ್ಲಿ ಭರ್ಜರಿಯಾಗಿ ನಡೆಯಿತು. ಕಟ್ಟಿಗೆ ಬಂಡಿ, ಮಡಿಕೆ ಹಾಗೂ ಕೂರಿಗೆ ಸೇರಿದಂತೆ ಸಿರಿಧಾನ್ಯ ಮಹಿಳೆ ಮತ್ತು ಪುರುಷ ರೈತನ ಪ್ರತಿಮೆಗಳು ಪ್ರೇಕ್ಷಕರ ಮನಸೂರೆಗೊಂಡವು. ಈ ಕುರಿತು ಈ ಟಿವಿ ಭಾರತದೊಂದಿಗೆ ಕೃಷಿ ಇಲಾಖೆ ಜಂಟಿ ನಿರ್ದೇಶಕ ಡಾ. ಮಲ್ಲಿಕಾರ್ಜುನ, ಸಿರಿ ಧಾನ್ಯ ಹಾಗೂ ಪಾರಂಪರಿಕ ಕೃಷಿ ಪದ್ಧತಿಗಳ ಕುರಿತು ಇಲ್ಲಿ ಜಾಗೃತಿ ಮೂಡಿಸಲಾಯಿತು. ಸಾವಿರಾರು ಪ್ರವಾಸಿಗರು ಈ ಮೇಳದಲ್ಲಿ ಭಾಗವಹಿಸಿ ವೀಕ್ಷಣೆ ಮಾಡಿದರು ಎಂದು ತಿಳಿಸಿದರು.