ಬೆಳಗಾವಿ ಗಣೇಶೋತ್ಸವಕ್ಕೆ ವಿಜೃಂಭಣೆಯ ತೆರೆ... ನಿರ್ಮಾಣವಾಯ್ತು ಹೊಸ ದಾಖಲೆ - Belgavi news
ಬೆಳಗಾವಿ: ಕುಂದಾನಗರಿಯ ಐತಿಹಾಸಿಕ ಗಣೇಶೋತ್ಸವಕ್ಕೆ ಅತ್ಯಂತ ವಿಜೃಂಭಣೆಯಿಂದ ತೆರೆ ಬಿದ್ದಿದೆ. ಈ ಭಾರಿ ಸತತ 27 ಘಂಟೆಗಳ ಕಾಲ ಗಣೇಶ ನಿಮಜ್ಜನ ನಡೆದಿದ್ದು, ಹೊಸ ದಾಖಲೆ ನಿರ್ಮಾಣವಾಗಿದೆ. ಗಣೇಶ ನಿಮಜ್ಜನಕ್ಕೆ ರಾಜ್ಯದ ನಾನಾ ಭಾಗಗಳಿಂದ ಜನರು ಆಗಮಿಸಿದ್ದು, ಹನ್ನೊಂದನೇ ದಿನ ನಡೆಯುವ ಅದ್ದೂರಿ ನಿಮಜ್ಜನ ಕಾರ್ಯಕ್ರಮ ಹೊಸ ದಾಖಲೆಯೊಂದಿಗೆ ಸಮಾಪ್ತಿಗೊಂಡಿತು.