ಬದುಕು ಕಿತ್ತುಕೊಂಡ ಪ್ರವಾಹ: ನಿರಾಶ್ರಿತರ ಗ್ರಾಮದಲ್ಲಿ ನರಕ ಯಾತನೆ
ಮಹಾರಾಷ್ಟ್ರದಲ್ಲಿ ಸುರಿದ ಭಾರೀ ಮಳೆಯಿಂದ ಕೃಷ್ಣಾ ನದಿ ತೀರದಲ್ಲಿ ಪ್ರವಾಹ ಉಂಟಾಗಿ ಬೆಳಗಾವಿ ಜಿಲ್ಲೆ ಅಥಣಿ ತಾಲೂಕು ಕಾತ್ರಾಳ ಗ್ರಾಮದ ನೂರಾರು ಕುಟುಂಬಗಳ ಬದುಕೇ ನೀರು ಪಾಲಾಗಿದೆ. ಸದ್ಯ ಮಳೆ ನಿಂತು ಪ್ರಾವಾಹವೇನೋ ಕಡಿಮೆಯಾಗಿದೆ. ಆದರೆ ವರುಣನ ಅಬ್ಬರಕ್ಕೆ ಎಲ್ಲವನ್ನು ಕಳೆದುಕೊಂಡ ಜನ ಬೀದಿ ಪಾಲಾಗಿದ್ದಾರೆ. ಸರ್ವವನ್ನೂ ಕಳೆದುಕೊಂಡ ಜನ, ನಮ್ಮ ಮುಂದಿನ ಜೀವನ ಹೇಗೆ ಎಂಬ ಚಿಂತೆಯಲ್ಲಿದ್ದು, ಹೊಸ ಬದುಕು ಕಟ್ಟಿಕೊಳ್ಳುವ ತವಕದಲ್ಲಿದ್ದಾರೆ.