ದೇಶಭಕ್ತಿ ಹಾಡುಗಳಿಗೆ ಬೆಳಗಾವಿ ಹೈದರ ಸಖತ್ ಸ್ಟೆಪ್ಸ್... ಇವರ ಟಪಾಂಗುಚ್ಚಿಗೆ ಜನರು ಫಿದಾ! - ಬೆಳಗಾವಿ ಜಿಲ್ಲೆ ಹುಕ್ಕೇರಿ ಪಟ್ಟಣ
ಸ್ವಾತಂತ್ರ್ಯ ದಿನದ ನಿಮಿತ್ತ ಗ್ರಾಮೀಣ ಭಾಗದ ಯುವಕರು ನಿರ್ಮಿಸಿರುವ ವಿಡಿಯೋ ಒಂದು ಈಗ ಸಖತ್ ಫೇಮಸ್ ಆಗಿದೆ. ಬೆಳಗಾವಿ ಜಿಲ್ಲೆ ಹುಕ್ಕೇರಿ ಪಟ್ಟಣದ ಗ್ರಾಮೀಣ ಭಾಗದ ಮುಸ್ತಫಾ ಖಾನ್ ಹಾಗೂ ಅವರ ಗ್ಲೋಯಿಂಗ್ ಸ್ಟಾರ್ ತಂಡದ ಸದಸ್ಯರು ಸಾಹಸ ಪ್ರದರ್ಶನದ ಜೊತೆಗೆ ದೇಶಭಕ್ತಿ ಹಾಡುಗಳಿಗೆ ಸಖತ್ ಸ್ಟೆಪ್ಸ್ ಹಾಕಿ ಡ್ಯಾನ್ಸ್ ಮಾಡಿರುವ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿದೆ. ಈ ವಿಡಿಯೋ ಮೂಲಕ ಧರ್ಮದ ಹೆಸರಿನಲ್ಲಿ ಕಿತ್ತಾಡುವುದನ್ನ ನಿಲ್ಲಿಸಿ ಎನ್ನುವ ಸಂದೇಶದ ಜೊತೆಗೆ ದೇಶಭಕ್ತಿಯನ್ನ ಸಾರಿದೆ ಈ ಯಂಗ್ ಬಾಯ್ಸ್ ಟೀಂ.