ಕಲರ್ಫುಲ್ ಕ್ಯಾಂಪಸ್ನಲ್ಲಿ ಜಾನಪದ ಜಾತ್ರೆ: ದೇಸಿ ಉಡುಗೆಯಲ್ಲಿ ಮಿಂಚಿದ ವಿದ್ಯಾರ್ಥಿಗಳು, ಶಿಕ್ಷಕರು - ಬೆಳಗಾವಿ ಕೆಎಲ್ ಇ ಜಾನಪದ ಜಾತ್ರೆ ಕಾರ್ಯಕ್ರಮ
ಪ್ಯಾಂಟು ಶರ್ಟು, ಚೂಡಿದಾರ್, ಟೀ ಶರ್ಟ್ ಹಾಕಿಕೊಂಡು ಬೋರಾಗಿದ್ದ ವಿದ್ಯಾರ್ಥಿಗಳು ಜಾನಪದ ಜಾತ್ರೆ ಹಿನ್ನೆಲೆ ದೇಸಿ ಉಡುಪು ಧರಿಸಿ ಮಿಂಚಿದರು. ಸದಾ ಅಧ್ಯಯನದಲ್ಲಿ ಬ್ಯುಸಿ ಇದ್ದ ವಿದ್ಯಾರ್ಥಿಗಳು ಅದೆಲ್ಲವನ್ನೂ ಮರೆತು ಅಡುಗೆ ಮಾಡುವ ಗುಂಗಲ್ಲಿದ್ದರು. ಇತ್ತ ಪಾಠ ಹೇಳಬೇಕಿದ್ದ ಶಿಕ್ಷಕರು ಕೂಡ ದೇಸಿ ಉಡುಪು ಧರಿಸಿ ವಿದ್ಯಾರ್ಥಿಗಳೊಂದಿಗೆ ಕೈ ಜೋಡಿಸಿದರು.