ಕುಕ್ಕೆಯಲ್ಲಿ ಜರುಗಿದ ಪಂಚಮಿ ತೇರು ಉತ್ಸವ, ಆಕರ್ಷಕ ಬೆಡಿ ಉತ್ಸವ - ಕುಕ್ಕೆ ಶ್ರೀಸುಬ್ರಹ್ಮಣ್ಯ ಕ್ಷೇತ್ರ
ಸುಬ್ರಹ್ಮಣ್ಯ: ಪ್ರಸಿದ್ಧ ನಾಗ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಚಂಪಾಷಷ್ಠಿ ವಾರ್ಷಿಕ ಜಾತ್ರೆ ಪ್ರಯುಕ್ತ ಮಾರ್ಗಶಿರ ಶುದ್ಧ ಪಂಚಮಿಯ ದಿನವಾದ ನಿನ್ನೆ ಪಲ್ಲಕ್ಕಿ ಪೂಜೆ, ರಾತ್ರಿ ತೈಲಾಭ್ಯಂಜನ ಮತ್ತು ಮಧ್ಯರಾತ್ರಿ ಪಂಚಮಿ ರಥೋತ್ಸವ ಹಾಗೂ ಆಕರ್ಷಕ ಬೆಡಿ ಉತ್ಸವ ಜರುಗಿತು. ಇಂದು ಬೆಳಗ್ಗೆ ಬ್ರಹ್ಮರಥ ಮಹೋತ್ಸವ ನೆರವೇರಿತು.