ನಿಟ್ಟೂರಲ್ಲಿ ಕರಡಿ ವಾಕಿಂಗ್: ಅಚ್ಚರಿ ಜೊತೆಗೆ ಆತಂಕದಲ್ಲಿ ಗ್ರಾಮಸ್ಥರು - ವಿರಾಜಪೇಟೆ ತಾಲೂಕಿನ ನಿಟ್ಟೂರು ಗ್ರಾಮದಲ್ಲಿ ಕರಡಿ
ಕೊಡಗು: ವಿರಾಜಪೇಟೆ ತಾಲೂಕಿನ ನಿಟ್ಟೂರು ಗ್ರಾಮದಲ್ಲಿ ರಸ್ತೆಯಲ್ಲೇ ಕರಡಿಯೊಂದು ಓಡಾಡಿದೆ. ಇಷ್ಟು ದಿನಗಳು ಕಾಡಾನೆ, ಹುಲಿ ದಾಳಿಯಿಂದ ಕಂಗೆಟ್ಟಿದ್ದ ಕೊಡಗಿನ ಜನತೆಗೆ ಇದೀಗ ಗ್ರಾಮದೊಳಗೆಯೇ ನಿರ್ಭೀತಿಯಿಂದ ಜಾಂಬುವಂತ ನಡೆದು ಹೋಗಿರುವುದು ಅಚ್ಚರಿ ಜೊತೆಗೆ ಆತಂಕವನ್ನೂ ಸೃಷ್ಟಿಸಿದೆ.