ಆಹಾರ ಅರಸಿ ಬಂದು, ಆಯ ತಪ್ಪಿ ಬರಡು ಬಾವಿಗೆ ಬಿದ್ದ ಕರಡಿ - ಅರಣ್ಯ ಇಲಾಖೆಗೆ ಮಾಹಿತಿ
ಕೊಪ್ಪಳ ತಾಲೂಕಿನ ಇರಕಲಗಡಾ ಹೋಬಳಿಯ ಹನುಮಂತಪ್ಪ ಬಡಿಗೇರ್ ಎಂಬವರಿಗೆ ಸೇರಿದ ಜಮೀನಿನಲ್ಲಿರುವ ಬರಡು ಬಾವಿಗೆ ಕರಡಿ ಆಯತಪ್ಪಿ ಬಿದ್ದಿದೆ. ಬಾವಿ ದಡದ ಮರಗಳಲ್ಲಿದ್ದ ಜೇನು ಸವಿಯಲು ಬಂದ ಜಾಂಬವಂತ ಬಾವಿಗೆ ಬಿದ್ದಿದ್ದಾನೆ. ಬೆಳಗ್ಗೆ ಬಾವಿಯಲ್ಲಿ ಕರಡಿಯ ಚಿರಾಟ ಕೇಳಿದ ಸ್ಥಳೀಯರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಕರಡಿ ನೋಡಲು ಜನರು ತಂಡೋಪತಂಡವಾಗಿ ಘಟನಾ ಸ್ಥಳಕ್ಕೆ ಬರ್ತಿದ್ದಾರೆ.