ಆಹಾರ ಅರಸಿ ನಾಡಿಗೆ ಬಂದ ಕರಡಿ ಸೆರೆ - ಆಹಾರ ಅರಸಿ ನಾಡಿಗೆ ಬಂದ ಕರಡಿ ಸೆರೆ
ಕಾಡಿನಿಂದ ನಾಡಿಗೆ ಬಂದಿದ್ದ ಕರಡಿಯನ್ನು ಚಿಕ್ಕಮಗಳೂರು ಜಿಲ್ಲೆಯಲ್ಲಿ ಅರಣ್ಯ ಇಲಾಖೆಯ ಸಿಬ್ಬಂದಿ ಸೆರೆ ಹಿಡಿದಿದ್ದಾರೆ. ಕಡೂರು ತಾಲೂಕಿನ ಸಿಂಗಟಗೆರೆ ಗ್ರಾಮಕ್ಕೆ ಕಳೆದ ಹಲವಾರು ದಿನಗಳಿಂದ ಸುಮಾರು 16 ವರ್ಷ ವಯಸ್ಸಿನ ಹೆಣ್ಣು ಕರಡಿಯೊಂದು ಬರುತ್ತಿತ್ತು. ಇದನ್ನು ನೋಡಿದಂತಹ ಗ್ರಾಮಸ್ಥರು ಬೆಚ್ಚಿ ಬಿದ್ದಿದ್ದರು. ಈ ಕರಡಿಗೆ ತುಂಬಾ ವಯಸ್ಸು ಆಗಿರುವ ಕಾರಣ ಕಾಡಿನಲ್ಲಿ ಸರಿಯಾಗಿ ಆಹಾರ ಸಿಗದೆ ನಾಡಿನತ್ತ ಬಂದಿದ್ದು, ರೈತರ ತೋಟಗಳಿಗೆ ನುಗ್ಗಿ ಸಾರ್ವಜನಿಕರಲ್ಲಿ ಭಯದ ವಾತಾವರಣ ಸೃಷ್ಟಿಸಿತ್ತು. ಕೂಡಲೇ ಗ್ರಾಮಸ್ಥರು ಕರಡಿ ಬಂದಿರುವ ಕುರಿತು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದು, ಅರಣ್ಯ ಇಲಾಖೆಯ ಸಿಬ್ಬಂದಿ ಬಲೆ ಹಾಕಿ ಈ ಹೆಣ್ಣು ಕರಡಿಯನ್ನು ಸೆರೆ ಹಿಡಿದಿದ್ದಾರೆ.