ಕರ್ನಾಟಕ

karnataka

ETV Bharat / videos

ಆನೇಕಲ್​ ಸುತ್ತಮುತ್ತ ಕರಡಿಗಳ ಓಡಾಟ: ಗ್ರಾಮಸ್ಥರಲ್ಲಿ ಆತಂಕ - Anekal bear news 2021

By

Published : Apr 23, 2021, 7:05 AM IST

ಆನೇಕಲ್: ಆನೇಕಲ್ ಸುತ್ತಮುತ್ತ 2-3 ಕರಡಿಗಳು ಓಡಾಡುತ್ತಿವೆ. ಈ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಕಳೆದ ಕೆಲ ದಿನಗಳ ಹಿಂದೆ ಜಿಗಣಿಯ ಹುಲ್ಲಹಳ್ಳಿಯಲ್ಲಿ ಕರಡಿ ಕಾಣಿಸಿಕೊಂಡಿತ್ತು. ಇದೀಗ ಮತ್ತೆ ಮುಂಜಾನೆಯಲ್ಲಿ ಎಲೆಕ್ಟ್ರಾನಿಕ್ ಸಿಟಿಯಲ್ಲಿ ಕರಡಿ ಪ್ರತ್ಯಕ್ಷಗೊಂಡಿದೆ. ಅಲ್ಲದೆ ಎಲೆಕ್ಟ್ರಾನಿಕ್ ಸಿಟಿ ಸಮೀಪದ ತೋಗೂರು, ಬೇಗೂರು ಸುತ್ತಮುತ್ತ ಸಿಸಿಟಿವಿಯಲ್ಲಿ ಕರಡಿ ಓಡಾಟದ ದೃಶ್ಯಗಳು ಸೆರೆಯಾಗಿವೆ. ಪದೇ ಪದೇ ಕರಡಿಯು ಜನವಸತಿ ಪ್ರದೇಶಗಳಲ್ಲಿ ಪ್ರತ್ಯಕ್ಷವಾಗುತ್ತಿರುವ ಹಿನ್ನೆಲೆಯಲ್ಲಿ ಸ್ಥಳೀಯರನ್ನು ಬೆಚ್ಚಿ ಬೀಳಿಸುವಂತೆ ಮಾಡಿದೆ. ಇನ್ನು ಕರಡಿ ಸೆರೆಗೆ ಅರಣ್ಯ ಇಲಾಖೆ ಶೋಧ ಕಾರ್ಯ ಮುಂದುವರೆಸಿದ್ದು, ಅಲ್ಲಲ್ಲಿ ಬೋನುಗಳಿಟ್ಟಿದ್ದಾರೆ.

ABOUT THE AUTHOR

...view details