ಕರ್ನಾಟಕ

karnataka

ETV Bharat / videos

ಬೆಳೆ ವಿಮೆ ಸಮೀಕ್ಷೆ ಈಗಾಗಲೇ ಮಾಡಿ ಆಗಿದೆ: ಕೃಷಿ ಸಚಿವ - ಕೃಷಿ ಸಚಿವ ಬಿ.ಸಿ. ಪಾಟೀಲ‌

By

Published : Oct 8, 2020, 3:23 PM IST

ಧಾರವಾಡ: ಬೆಳೆ ವಿಮೆ ಸಮೀಕ್ಷೆ ಈಗಾಗಲೇ ಮಾಡಿ ಆಗಿದೆ. 2 ಕೋಟಿ 1 ವರೆ ಲಕ್ಷ ಬೆಳೆ ಸಮೀಕ್ಷೆ ಆಗಿ ಹೋಗಿದೆ. ಈ ವರ್ಷ ರೈತರಿಂದಲೇ ಮಾಡಿಸಿದ್ದೇವೆ. ಶೇ. 95ರಷ್ಟು ಸಮೀಕ್ಷೆ ಮಾಡಿ ಆಗಿದೆ. ಮತ್ತೇ ಯಾವುದೇ ಸಮೀಕ್ಷೆ ಮಾಡುವುದಿಲ್ಲ ಕೃಷಿ ಸಚಿವ ಬಿ.ಸಿ. ಪಾಟೀಲ್‌ ಹೇಳಿದ್ದಾರೆ. ಧಾರವಾಡದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ ಸೋಮವಾರ ಇನ್ಶುರೆನ್ಸ್ ಕಂಪನಿಗಳ ಸಭೆ ಮಾಡಿದ್ದೇನೆ.‌ 2016ರಿಂದ 2020ರವರೆಗೆ ಎಲ್ಲಾ ವಿಮೆಗಳು ಕ್ಲಿಯರ್ ಆಗುತ್ತವೆ. ಕೆಲವೊಂದು ತಾಂತ್ರಿಕ ತೊಂದರೆಗಳಿದ್ದವು. ಅಂಥವರಿಗೆ ಚೆಕ್ ಮೂಲಕ ಪರಿಹಾರ ಕೊಡಲು ಕಂಪನಿಗಳಿಗೆ ಹೇಳಿದ್ದೇನೆ ಎಂದರು. ಕೃಷಿ ವಿವಿಯ ಕುಲಪತಿ ದೂರಿನ ವಿರುದ್ಧ ಪ್ರತಿಕ್ರಿಯಿಸಿದ ಸಚಿವ ಬಿ.ಸಿ.ಪಾಟೀಲ, ನನ್ನ ಗಮನಕ್ಕೆ ಬಂದಿಲ್ಲ. ಬಂದರೆ, ಪರಿಶೀಲಿಸಿ ಕ್ರಮ ಕೈಗೊಳುವುದಾಗಿ ತಿಳಿಸಿದರು.

ABOUT THE AUTHOR

...view details