ನಾನೂ ಕನ್ನಡಿಗ, ಬೆಂಗಳೂರಿನ ಅಭಿವೃದ್ಧಿಗೆ ದುಡಿಯುವೆ... 'ಈಟಿವಿ ಭಾರತ' ಜೊತೆ ಬಿಬಿಎಂಪಿ ನೂತನ ಮೇಯರ್ ಮಾತು - mayor goutam kumar
ಬೆಂಗಳೂರು: ಬಿಬಿಎಂಪಿಯ 53ನೇ ಮೇಯರ್ ಆಗಿ ಚುನಾಯಿತರಾದ ಜೋಗುಪಾಳ್ಯ ವಾರ್ಡ್ನ ಎನ್.ಗೌತಮ್ ಕುಮಾರ್, ಈಟಿವಿ ಭಾರತ್ ಜೊತೆ ಮಾತನಾಡಿದರು. ಮೇಯರ್ ಕನ್ನಡಿಗರಲ್ಲ ಎಂದು ಕನ್ನಡಪರ ಹೋರಾಟಗಾರರು ಪ್ರತಿಭಟಿಸಿದ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಕರ್ನಾಟಕದ ಬಳ್ಳಾರಿ ಜಿಲ್ಲೆಯಲ್ಲಿ ಹುಟ್ಟಿದವನು ನಾನು. ಕನ್ನಡಿಗರಿಗೆ, ಬೆಂಗಳೂರಿಗರಿಗೆ ಧಕ್ಕೆ ಬರುವ ರೀತಿ ಕೆಲಸ ಮಾಡುವುದಿಲ್ಲ. ಮನೆ ಮಗನ ರೀತಿ ಕೆಲಸ ಮಾಡುತ್ತೇನೆ ಎಂದರು.