ಸೂರ್ಯ ಗ್ರಹಣ ವೇಳೆ ಕೂಡಲ ಸಂಗಮದಲ್ಲಿ ಮಿಂದ ಭಕ್ತರಿಂದ ವಿಶೇಷ ಪೂಜೆ! - ಸೂರ್ಯ ಗ್ರಹಣ
ಬಾಗಲಕೋಟೆ : ಇಂದು ಸೂರ್ಯ ಗ್ರಹಣ ಹಿನ್ನೆಲೆ ಕೂಡಲ ಸಂಗಮದಲ್ಲಿ ಪುಣ್ಯ ಸ್ನಾನ ಮಾಡಿ ಭಕ್ತರು ಶಿವನಾಮ ಸ್ಮರಣೆ, ವಿಶೇಷ ಪೂಜೆಯಲ್ಲಿ ಪಾಲ್ಗೊಂಡರು. ಕೃಷ್ಣ, ಮಲ್ಲಪ್ರಭಾ ಹಾಗೂ ಘಟಪ್ರಭಾ ನದಿಯ ಸಂಗಮ ಹಾಗೂ ಅಣ್ಣ ಬಸವಣ್ಣನವರ ಐಕ್ಯ ಸ್ಥಳ ಕೂಡಲ ಸಂಗಮದಲ್ಲಿ ಭಕ್ತರು ಮಿಂದೆದ್ದರು. ಗ್ರಹಣ ಸಮಯದಲ್ಲಿ ಪುಣ್ಯ ಸ್ನಾನ ಮಾಡಿ ಪ್ರಾರ್ಥಿಸಿದ್ರೆ ಇಷ್ಟಾರ್ಥ ಸಿದ್ಧಿಯಾಗುತ್ತೆ ಎಂಬ ನಂಬಿಕೆ. ಹಾಗಾಗಿ ಗ್ರಹಣದ ನಂತರ ಸಂಗಮನಾಥನ ದರ್ಶನ ಪಡೆದು ಭಕ್ತರು ಪುನೀತರಾದರು.
Last Updated : Jun 21, 2020, 8:33 PM IST