ಅಂಬಾರಿ ಹೊರುವ ಅರ್ಜುನನಿಗೆ ಸ್ನಾನ ಹೀಗೆ ಮಾಡಿಸ್ತಾರೆ..
ಮೈಸೂರು ದಸರಾದ ಜಂಬೂಸವಾರಿ ದಿನ 750 ಕೆಜಿ ತೂಕದ ಚಿನ್ನದ ಅಂಬಾರಿಯ ಒಳಗೆ ಚಾಮುಂಡಿ ತಾಯಿಯ ಉತ್ಸವ ಮೂರ್ತಿಯನ್ನು ಹೊತ್ತು ಮೆರವಣಿಗೆಯಲ್ಲಿ ಸಾಗುವ ಅರ್ಜುನ ಆನೆಗೆ ಪ್ರತಿದಿನ 2 ಬಾರಿ ತಾಲೀಮು, ವಿಶೇಷ ಆಹಾರ ಹಾಗೂ ಹಣ್ಣುಗಳನ್ನು ನೀಡಿ ಅಂಬಾರಿ ಹೊರಲು ತಯಾರಿ ಮಾಡಿಸಲಾಗುತ್ತಿದೆ. ಇದರ ಜೊತೆಗೆ 56 ವರ್ಷದ ಅರ್ಜುನ ಆನೆ 5800 ಕೆಜಿ ತೂಕವಿದ್ದು, ಪ್ರತಿದಿನವೂ ಈ ಆನೆಗೆ ವಿಶೇಷವಾಗಿ ಮೈಗೆ ಎಣ್ಣೆ ಹಾಕಿ ಸುಮಾರು 3 ಗಂಟೆಗಳ ಕಾಲ ಸ್ನಾನ ಮಾಡಿಸಲಾಗುತ್ತದೆ.