ನವರಾತ್ರಿ ಉತ್ಸವ: ಬಸವಕಲ್ಯಾಣದಲ್ಲಿ ಗಮನ ಸೆಳೆದ ದಾಂಡಿಯಾ ನೃತ್ಯ - ಬೀದರ್ನ ಬಸವಕಲ್ಯಾಣ
ನವರಾತ್ರಿ ಮಹೋತ್ಸವ ನಿಮಿತ್ತ ಬಸವಕಲ್ಯಾಣ ನಗರದ ಸೀತಾ ಕಾಲೋನಿಯಲ್ಲಿ ದಾಂಡಿಯ ನೃತ್ಯದ ಸಂಭ್ರಮ ಕಳೆಗಟ್ಟಿತ್ತು. ಹಬ್ಬದ ನಿಮಿತ್ತ ಪ್ರತಿಷ್ಠಾಪಿಸಲಾದ ಅಂಬಾ ಭವಾನಿ ಮೂರ್ತಿ ಬಳಿ ನಿರ್ಮಿಸಲಾದ ವಿಶಾಲವಾದ ಮಂಟಪದಲ್ಲಿ ಮಹಿಳೆಯರು ದಾಂಡಿಯ ನೃತ್ಯ ಮಾಡುವ ಮೂಲಕ ಮೆರಗು ತಂದು ಕೊಟ್ಟರು. ಸಂಜೆ 7ಕ್ಕೆ ಆರಂಭವಾಗುವ ಡಾಂಡಿಯಾ ನೃತ್ಯ ನೋಡಲು ನಗರದ ಸಾರ್ವಜನಿಕರು ಕುಟುಂಬ ಸಮೇತ ತಂಡೋಪತಂಡವಾಗಿ ಆಗಮಿಸಿದ್ದರು. ಝಗಮಗಿಸುವ ವಿದ್ಯುತ್ ದೀಪಗಳಿಂದ ಅಲಂಕರಿಸಿದ್ದ ಮಂಟಪದಲ್ಲಿ ರಾಜಸ್ಥಾನಿ ಭಕ್ತಿ ಗೀತೆಗಳನ್ನು ಹಾಕಿ ನೃತ್ಯ ಮಾಡಲಾಯಿತು. ರಾಜಸ್ಥಾನಿ ಮಹಿಳೆಯರೊಂದಿಗೆ ನಗರದ ಮಹಿಳೆಯರು ಅದರಲ್ಲೂ ವಿಶೇಷವಾಗಿ ಯುವತಿಯರು ಸೇರಿಕೊಂಡು ಇಲ್ಲಿ ಸಾಮೂಹಿಕ ನೃತ್ಯ ಮಾಡುವ ಮೂಲಕ ಗಮನ ಸೇಳೆದರು.