ಬಿಎಸ್ವೈ ತಮ್ಮ ಬರ್ತಡೇ ಗಿಫ್ಟ್ ಕೊಡ್ತಾರೆ.. ಮೀಸಲಾತಿ ನಿರೀಕ್ಷೆಯಲ್ಲಿ ಮುಂದುವರೆದ 'ಪಂಚಮ ಧರಣಿ' - ಬಸವ ಜಯಮೃತ್ಯಂಜಯ ಶ್ರೀಗಳು ಹೋರಾಟ
ಬೆಂಗಳೂರು: ಪಂಚಮಸಾಲಿ ಸಮುದಾಯವನ್ನು ಪ್ರವರ್ಗ 2ಎ ಗೆ ಸೇರಿಸುವಂತೆ ಆಗ್ರಹಿಸಿ ನಗರದ ಫ್ರೀಡಂ ಪಾರ್ಕ್ನಲ್ಲಿ ಕೂಡಲ ಸಂಗಮದ ಬಸವ ಜಯಮೃತ್ಯುಂಜಯ ಶ್ರೀಗಳ ನೇತೃತ್ವದಲ್ಲಿ ಧರಣಿ ಸತ್ಯಾಗ್ರಹ ಮುಂದುವರೆದಿದೆ. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ತಮ್ಮ 80ನೇ ವರ್ಷದ ಹುಟ್ಟುಹಬ್ಬದ ಕೊಡುಗೆಯಾಗಿ ಮೀಸಲಾತಿಯನ್ನು ಘೋಷಿಸಲಿದ್ದಾರೆ ಎನ್ನುವ ನಿರೀಕ್ಷೆಯಲ್ಲಿ ಧರಣಿ ಸಾಗಿದೆ. ಸರ್ಕಾರದ ವಿಳಂಬ ಧೋರಣೆ, ಸಚಿವರ ಭರವಸೆ, ಮುಂದಿನ ಹೋರಾಟದ ಸ್ವರೂಪದ ಕುರಿತು ಸಭೆ ಆಯೋಜನೆ ಮಾಡಿರುವುದು ಸೇರಿದಂತೆ ಹೋರಾಟದ ಕುರಿತು ಕೂಡಲ ಸಂಗಮ ಶ್ರೀಗಳ ಜೊತೆ ಈಟಿವಿ ಭಾರತ ಪ್ರತಿನಿಧಿ ನಡೆಸಿರುವ ಚಿಟ್ ಚಾಟ್ ಇಲ್ಲಿದೆ.. ನೋಡಿ..