ನಿತ್ಯ ಹಸಿರಿನಿಂದ ಕಂಗೊಳಿಸುತ್ತಿದ್ದ ನಾಡಲ್ಲಿ ಈಗ ಹನಿ ನೀರಿಗೂ ಪರದಾಟ! - kannada news
ಶಿವಮೊಗ್ಗ : ಅತೀ ಹೆಚ್ಚು ಕರೆಗಳನ್ನು ಹೊಂದಿರುವ ಖ್ಯಾತಿ ಪಡೆದ ಜಿಲ್ಲೆಯಲ್ಲಿ ಹನಿ ನೀರಿಗಾಗಿ ಹಾಹಾಕಾರ ಶುರುವಾಗಿದೆ. 600 ಅಡಿ ಬೋರ್ ವೆಲ್ ಕೊರೆಸಿದರೂ ನೀರು ಸಿಗ್ತಿಲ್ಲ, ಬೆಳೆಗಳು ಬಿಸಿಲಿನ ಬೆಗೆಗೆ ಒಣಗಿ ಹೋಗಿದ್ದು, ಹೇಗಾದ್ರೂ ಮಾಡಿ ಬೆಳೆ ಉಳಿಸಿಕೊಳ್ಳಬೇಕೆಂದು ಟ್ಯಾಂಕರ್ ವೊಂದಕ್ಕೆ 800 ರೂಪಾಯಿ ಕೊಟ್ಟು ನೀರು ತರಿಸಿ ಹಾಯಿಸಲಾಗುತ್ತಿದೆ. ಈ ಬಗ್ಗೆ ಕೂಡಲೇ ಜಿಲ್ಲಾಡಳಿತ ಎಚ್ಚೆತ್ತುಕೊಂಡು ನೀರಿನ ಸಮಸ್ಯೆ ಬಗೆಹರಿಸಬೇಕೆಂದು ಸ್ಥಳೀಯರು ಒತ್ತಾಯಿಸುತ್ತಿದ್ದಾರೆ.