ಕರ್ನಾಟಕ

karnataka

ETV Bharat / videos

'ಗ್ರಾಹಕರೇ ದೇವರು', ಮೊದಲಿಬ್ಬರು ಮದ್ಯಪ್ರಿಯರಿಗೆ ಹಾರ ಹಾಕಿ ಬರಮಾಡಿಕೊಂಡ ಬಾರ್ ಮಾಲೀಕ - ಬೆಳಗಾವಿ

By

Published : May 4, 2020, 12:44 PM IST

40 ದಿನಗಳ ಬಳಿಕ ಮದ್ಯದಂಗಡಿ ಓಪನ್ ಆಗಿದ್ದು, ಮದ್ಯ ಖರೀದಿಗೆ ಬಂದಿದ್ದ ಮೊದಲಿಬ್ಬರು ಕುಡುಕರಿಗೆ ಬಾರ್ ಮಾಲೀಕ ಹಾರ ಹಾಕಿ ಸನ್ಮಾನಿಸಿದ ಘಟನೆ ಬೆಳಗಾವಿಯಲ್ಲಿ ನಡೆದಿದೆ. ನಗರದ ಆರ್​ಪಿಡಿ ವೃತ್ತದಲ್ಲಿರುವ ಮಯೂರ ಬಾರ್ ಮಾಲೀಕ ಪಂಕಜ್ ಅವರು ಇಬ್ಬರು ಕುಡುಕರಿಗೆ ಹೂವಿನ ಹಾರ ಹಾಕಿದರು. ಬೆಳಗ್ಗೆ 6 ಗಂಟೆಯಿಂದಲೇ ಬಾರ್ ಮುಂದೆ ಮದ್ಯಪ್ರಿಯರು ಜಮಾಯಿಸಿದ್ದರು. 40 ದಿನಗಳ ನಂತರ ಮದ್ಯದಂಗಡಿ ಮರು ಆರಂಭ ಆಗಿದ್ದು ಮದ್ಯಪ್ರಿಯರ ಖುಷಿಗೆ ಕಾರಣವಾಗಿದೆ. ಅಲ್ಲದೇ ಲಾಕ್​ಡೌನ್​ನಿಂದ ಕಂಗಾಲಾಗಿದ್ದ ಬಾರ್ ಮಾಲೀಕರು ಕೂಡ ಮದ್ಯದಂಗಡಿ ತೆರೆದಿದಕ್ಕೆ ಖುಷಿಯಾಗಿದ್ದಾರೆ. ಈ ಕಾರಣಕ್ಕೆ ಬಾರ್ ಮಾಲೀಕ ಸರತಿ ಸಾಲಿನಲ್ಲಿ ನಿಂತಿದ್ದ ಇಬ್ಬರು ಮದ್ಯಪ್ರಿಯರಿಗೆ ಹೂವಿನ ಹಾರ ಹಾಕಿ ಬರಮಾಡಿಕೊಂಡಿದ್ದಾರೆ.

ABOUT THE AUTHOR

...view details