ನಾಲ್ಕು ತಿಂಗಳಾದ್ರು ಪೂರ್ಣಗೊಳ್ಳದ ಕಿರು ಸೇತುವೆ ಕಾಮಗಾರಿ: ಗುತ್ತಿಗೆದಾರರ ವಿರುದ್ಧ ಸ್ಥಳಿಯರ ಆಕ್ರೋಶ - ಪೂರ್ಣಗೊಳ್ಳದ ಶಿವಮೊಗ್ಗ ಬಾಪೂಜಿ ನಗರ ಕಿರುಸೇತುವೆ ಕಾಮಗಾರಿ
ಶಿವಮೊಗ್ಗ: ನಗರದ ಬಾಪೂಜಿ ನಗರದಲ್ಲಿ ರಾಜ ಕಾಲುವೆಗೆ ಅಮೃತ ಯೋಜನೆಯಡಿ ಸೇತುವೆ ನಿರ್ಮಾಣ ಮಾಡಲಾಗುತ್ತಿದೆ. ಆದ್ರೆ ಈ ಸೇತುವೆಯನ್ನು ರಸ್ತೆಗಿಂತ 1.5 ಮೀಟರ್ ಎತ್ತರದಲ್ಲಿ ಅವೈಜ್ಞಾನಿಕವಾಗಿ ನಿರ್ಮಾಣ ಮಾಡಲಾಗುತ್ತಿದೆ ಎಂಬ ಆರೋಪ ಕೇಳಿ ಬಂದಿದೆ. ಅಲ್ಲದೆ ನಾಲ್ಕು ತಿಂಗಳಿನಿಂದ ಕಾಮಗಾರಿ ಕುಂಟುತ್ತಾ ಸಾಗಿದ್ದು ಇದರಿಂದ ಸಂಚಾರಕ್ಕೆ ಬಹಳ ತೊಂದರೆಯಾಗುತ್ತಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸ್ಥಳಕ್ಕೆ ಮಹಾನಗರ ಪಾಲಿಕೆ ವಿಪಕ್ಷ ನಾಯಕ ರಮೇಶ್ ಹೆಗಡೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.