ನೆಟ್ವರ್ಕ್ ಸಮಸ್ಯೆ.. ಬಂಟ್ವಾಳದಲ್ಲಿ ಆನ್ಲೈನ್ ಕ್ಲಾಸ್ಗೆ ನದಿ ತಟವೇ ಗತಿ - Bantwal latest update news
ದಕ್ಷಿಣ ಕನ್ನಡ ಬಂಟ್ವಾಳ ಪುರಸಭೆ ವ್ಯಾಪ್ತಿಯ ಮಧ್ಯೆ ಹರಿಯುತ್ತಿರುವ ನೇತ್ರಾವತಿ ನದಿ ತಟದ ಬಳಿ ಹೋದ್ರೆ ಚಿಣ್ಣರು ಕಾಣಸಿಗ್ತಾರೆ. ಹಾಗಂತ ಆಟ ಆಡೋಕೆ ಅವರಿಲ್ಲಿ ಬಂದು ಸೇರಿಲ್ಲ. ಆನ್ಲೈನ್ ಕ್ಲಾಸ್ಗೆ ಬೇಕಾದ ನೆಟ್ವರ್ಕ್ ಫಜೀತಿಯಿಂದ ನದಿ ತಟಕ್ಕೆ ಬಂದು ಮೊಬೈಲ್ನೊಂದಿಗೆ ಸರ್ಕಸ್ ಮಾಡ್ತಾರೆ.