ಹಥ್ರಾಸ್ ಘಟನೆ ಖಂಡಿಸಿ ಬಂಟ್ವಾಳದಲ್ಲಿ ರಮಾನಾಥ ರೈ ನೇತೃತ್ವದಲ್ಲಿ ಮೊಂಬತ್ತಿ ಮೆರವಣಿಗೆ - ಮಾಜಿ ಸಚಿವ ಬಿ.ರಮಾನಾಥ ರೈ
ಉತ್ತರ ಪ್ರದೇಶದಲ್ಲಿ ದಲಿತ ಯುವತಿಯ ಅತ್ಯಾಚಾರ ಮತ್ತು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಿಳೆಯರ ರಕ್ಷಣೆಗೆ ಕೇಂದ್ರ ಮತ್ತು ಉತ್ತರಪ್ರದೇಶ ಸರ್ಕಾರ ವಿಫಲವಾಗಿದೆ ಎಂದು ಆರೋಪಿಸಿ ಮಾಜಿ ಸಚಿವ ಬಿ.ರಮಾನಾಥ ರೈ ನೇತೃತ್ವದಲ್ಲಿ ಬಿಸಿರೋಡಿನ ಪೊಳಲಿ ದ್ವಾರದಿಂದ ರಕ್ತೇಶ್ವರಿ ದೇವಸ್ಥಾನದ ಮುಂಭಾಗದವರೆಗೆ ಕಾಂಗ್ರೆಸ್ ವತಿಯಿಂದ ಮೊಂಬತ್ತಿ ಜಾಥಾ ನಡೆಯಿತು.