ನೀ ಹೋಗಲೇ ಬೇಕಿದೆ, ಗುಡ್ ಬೈ ಕೊರೊನಾ: ಸಿಲಿಕಾನ್ ಸಿಟಿ ವಿದ್ಯಾರ್ಥಿಯ ಜಾಗೃತಿ ಗೀತೆ - ಬೆಂಗಳೂರು ಪೊಲೀಸ್ ವಿದ್ಯಾರ್ಥಿ ಸ್ಪರ್ಧೆ
ಲಾಕ್‌ಡೌನ್ ವೇಳೆ ಮನೆಯಲ್ಲಿ ಕೂತಿರುವ ಮಕ್ಕಳು ಬೇಸರ ಕಳೆಯಲು ನಗರ ದಕ್ಷಿಣ ವಿಭಾಗದ ಪೊಲೀಸರು ಏರ್ಪಡಿಸಿರುವ ಚಿತ್ರಕಲೆ ಹಾಗೂ ಪ್ರಬಂಧ ಸ್ಫರ್ಧೆಯಲ್ಲಿ ತಲ್ಲೀನರಾಗಿದ್ದಾರೆ. ಗಿರಿನಗರದ ಶಾಂತಿಧಾಮ ಪಬ್ಲಿಕ್ ಶಾಲೆಯ 8ನೇ ತರಗತಿ ವಿದ್ಯಾರ್ಥಿ ರೋಹನ್ ಕೊರೊನಾ ಕುರಿತು ಸಾಹಿತ್ಯ ರಚಿಸಿ ಹಾಡಿದ್ದಾನೆ. 'ನೀ ಹೋಗಲೇ ಬೇಕು ಈಗ..ಪ್ಲೇಗ್ ಬಂದು ಹೋಗಿದೆ ಗೊತ್ತಾ ಗೊತ್ತಾ.. ನೀ ಹೋಗಲೇ ಬೇಕಿದೆ ಗುಡ್ ಬೈ ಕೊರೊನಾ' ಎಂದು ಹಾಡು ಹಾಡುವ ಮೂಲಕ ಜಾಗೃತಿ ಮೂಡಿಸಿದ್ದಾರೆ. ಸದ್ಯ ರೋಹನ್ ಹಾಡು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.