ಬೆಂಗಳೂರು ಲಾಕ್‌ಡೌನ್ ವಿಚಾರ ಅಪ್ರಸ್ತುತ: ವೈದ್ಯಕೀಯ ಸಚಿವ ಸುಧಾಕರ್ ಹೇಳಿಕೆ - bangaore lockdown
ಗೃಹ ಸಚಿವ ಬೊಮ್ಮಯಿ ಜೊತೆ ವೈದ್ಯಕೀಯ ಶಿಕ್ಷಣ ಸಚಿವ ಸುಧಾಕರ್ ಅವರು ಸಿಎಂ ಯಡಿಯೂರಪ್ಪ ಭೇಟಿ ಮಾಡಿ ಸದ್ಯದ ಸ್ಥಿತಿಗತಿ ಬಗ್ಗೆ ತಿಳಿಸಿದ್ದಾರೆ. ಮಾಧ್ಯಮದವರೊಂದಿಗೆ ಮಾತನಾಡಿದ ಸುಧಾಕರ್, ಬೆಂಗಳೂರು ಲಾಕ್‌ಡೌನ್ ಮಾಡ್ತಾರೆ ಅನ್ನೋದೀಗ ಅಪ್ರಸ್ತುತ. ಅಂತೆ ಕಂತೆಗಳಿಗೆ ಯಾರೂ ಕಿವಿ ಕೊಡೋದು ಬೇಡ. ಸದ್ಯ ವಿಕ್ಟೋರಿಯಾ ಆಸ್ಪತ್ರೆಯನ್ನು ಕೊವಿಡ್‌ಗೆ ಮೀಸಲಿಡುತ್ತಿದ್ದು ಅಲ್ಲಿ ಸಕಲ ವ್ಯವಸ್ಥೆ ಮಾಡಲಾಗಿದೆ. ಹಾಗೆಯೇ ಕೊರೊನಾ ಬಗ್ಗೆಯ ಇವತ್ತಿನ ಎಲ್ಲಾ ಅಪ್ಡೇಟ್ಸ್ಗಳನ್ನು ಸಂಜೆ ಆರೋಗ್ಯಾಧಿಕಾರಿಗಳು ಬುಲೆಟಿನ್ ರಿಲೀಸ್ ಮಾಡ್ತಾರೆ. ಸದ್ಯದ ಸ್ಥಿತಿ ಬಗ್ಗೆ ಸಿಎಂ ಯಡಿಯೂರಪ್ಪರವರು ಸ್ಪಷ್ಟಪಡಿಸಿದ್ದಾರೆ. ಕೊವಿಡ್ -19 ಟೆಸ್ಟ್ ಮಾಡೋದು, ನಂತ್ರ ಟ್ರೀಟ್ಮೆಂಟ್ ಕೊಡೋದು ಹಾಗೆಯೇ ಯಾರೆಲ್ಲಾ ಎಲ್ಲಿದ್ದಾರೆ ಎನ್ನುವ ಪರೀಕ್ಷೆ ಮಾಡೋದು ನಮ್ಮ ಮೂರು ಪ್ರಮುಖ ಆದ್ಯೆತೆಗಳಾಗಿವೆ ಎಂದು ತಿಳಿಸಿದ್ದಾರೆ.