ರಾಜ್ಯ ಕಾಂಗ್ರೆಸ್ ನಾಯಕರ ಆಗಮನದಿಂದ ಕೆಪಿಸಿಸಿ ಕಚೇರಿಗೆ ಮರುಕಳಿಸಿದ ವೈಭವ.. - ಬೆಂಗಳೂರು ಕಾಂಗ್ರೆಸ್ ಪಕ್ಷದ ಕಚೇರಿ
ಬಹುದಿನಗಳ ನಂತರ ಕೆಪಿಸಿಸಿ ಕಚೇರಿ ರಾಜ್ಯ ಕಾಂಗ್ರೆಸ್ ನಾಯಕರಿಂದ ತುಂಬಿ ತುಳುಕುವ ಮೂಲಕ ಮತ್ತೊಮ್ಮೆ ಹಳೆಯ ವೈಭವ ಪ್ರದರ್ಶಿಸುವ ಅವಕಾಶ ಪಡೆಯಿತು. ಕಳೆದ ಎರಡು ತಿಂಗಳಿಂದ ಬಹುತೇಕ ರಜಾದಿನದ ರೀತಿ ಗೋಚರಿಸುತ್ತಿದ್ದ ಕಾಂಗ್ರೆಸ್ ಕಚೇರಿ, ಹಿರಿಯ ಕಾಂಗ್ರೆಸ್ ನಾಯಕರ ಸಭೆಯ ಮೂಲಕ ಮತ್ತೊಮ್ಮೆ ಚಟುವಟಿಕೆಯ ಕೇಂದ್ರವಾಗಿ ಕಂಡು ಬಂತು.