ವರದಾ ನದಿ ಖಾಲಿ ಖಾಲಿ... ಕೊರೊನಾ ಭೀತಿಯಲ್ಲಿರುವ ಜನರಿಗೆ ನೀರಿನದ್ದೇ ಚಿಂತೆ - ಉತ್ತರ ಕನ್ನಡ ಲೇಟೆಸ್ಟ್ ನ್ಯೂಸ್
ಇಡೀ ದೇಶ ಕೊರೊನಾ ವೈರಸ್ ಭೀತಿಯಲ್ಲಿದ್ರೆ, ಉತ್ತರ ಕನ್ನಡ ಜಿಲ್ಲೆಯ ಜನರಿಗೆ ಕೋವಿಡ್-19, ಮಂಗನಕಾಯಿಲೆ ಭೀತಿ ಜೊತೆಗೆ ನೀರಿಗಾಗಿ ಹಾಹಾಕಾರ ಎದುರಾಗಿದೆ. ಜೀವನಾಡಿಯಾಗಿದ್ದ ವರದಾ ನದಿ ಬೇಸಿಗೆಯ ಆರಂಭದಲ್ಲೇ ಖಾಲಿಯಾಗಿರುವುದರಿಂದ ಇಲ್ಲಿನ ರೈತರ ಪಾಡು ಹೇಳತೀರದ್ದಾಗಿದೆ.