ಕಸದ ತೊಟ್ಟಿಯಂತಾದ ಬಳ್ಳಾರಿ ತಹಶೀಲ್ದಾರ್ ಕಚೇರಿ: ಹೆಸರಿಗೆ ಮಾತ್ರ ಸೀಮಿತವಾಯ್ತಾ ಸ್ವಚ್ಛಭಾರತ ಅಭಿಯಾನ? - ಬಳ್ಳಾರಿ ತಹಶೀಲ್ದಾರ್ ಕಚೇರಿ ಸುದ್ದಿ
ಗಣಿನಾಡು ಬಳ್ಳಾರಿಯ ಕೇಂದ್ರ ಸ್ಥಳವಾದ ತಹಶೀಲ್ದಾರ್ ಕಚೇರಿಯ ಆವರಣ ಅವ್ಯವಸ್ಥೆಯ ಆಗರವಾಗಿದೆ. ಸ್ವಚ್ಛತೆ ಕಾಪಾಡಿ, ತಮ್ಮ ಮನೆಗಳ ಸುತ್ತಮುತ್ತಲಿನ ಪ್ರದೇಶವನ್ನು ಸ್ವಚ್ಛವಾಗಿಟ್ಟುಕೊಳ್ಳಿ ಅಂತ ಅಭಿಯಾನ, ಜಾಗೃತಿ ಕಾರ್ಯಕ್ರಮಗಳನ್ನು ಮಾಡ್ತಾರೆ. ಆದ್ರೆ ಹೀಗೆ ಹೇಳೋ ಅಧಿಕಾರಿಗಳೇ ತಮ್ಮ ಕಚೇರಿಯ ಪ್ರದೇಶವನ್ನು ಹೇಗೆ ಇಟ್ಟಿಕೊಂಡಿದ್ದಾರೆ ಅನ್ನೋದನ್ನು ನೀವೇ ಒಂದು ಸಲ ನೋಡಿ.