ಬಳ್ಳಾರಿಯ ವಿಮ್ಸ್ ಆಸ್ಪತ್ರೆಯಲ್ಲಿ ವಿಶೇಷ ಆಯುಧ ಪೂಜೆ..! ವಿಡಿಯೋ.. - ವಿಜಯನಗರ ವೈದ್ಯಕೀಯ ವಿಜ್ಞಾನ ಸಂಸ್ಥೆ
ದಸರಾ ಹಬ್ಬದ ನಿಮಿತ್ತ ಇಲ್ಲಿನ ವಿಜಯನಗರ ವೈದ್ಯಕೀಯ ವಿಜ್ಞಾನ ಸಂಸ್ಥೆ (ವಿಮ್ಸ್) ಆಸ್ಪತ್ರೆಯ ತುರ್ತು ಶಸ್ತ್ರಚಿಕಿತ್ಸಾ ಘಟಕದಲ್ಲಿಂದು ಶಸ್ತ್ರಚಿಕಿತ್ಸೆ ಪರಿಕರಗಳಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು.ತುರ್ತು ಶಸ್ತ್ರಚಿಕಿತ್ಸೆ ವಿಭಾಗದ ಇನ್ಚಾರ್ಜ್ ಕುಮಾರಿಯವ್ರು ವಿಶೇಷವಾಗಿ ಶಸ್ತ್ರಚಿಕಿತ್ಸೆಗೆಂದು ಬಳಸುವ ಪರಿಕರಗಳಿಗೆ ಪೂಜೆಯನ್ನು ನೆರವೇರಿಸಿದರು.ಅಲ್ಲದೇ, ವಿಮ್ಸ್ ಆಸ್ಪತ್ರೆಯ ಪ್ರಮುಖದ್ವಾರಗಳು ತಳಿರು ತೋರಣಗಳಿಂದ ಕಂಗೊಳಿಸುತ್ತಿದ್ದವು. ಕ್ಷ- ಕಿರಣ, ಶಸ್ತ್ರ ಚಿಕಿತ್ಸಾ ಘಟಕ, ನೇತ್ರಾಲಯ ವಿಭಾಗ ಸೇರಿ ಇನ್ನಿತರೆ ವಿಭಾಗಗಳು ವಿಶೇಷ ಹೂವಿನ ಅಲಂಕಾರದಿಂದ ಸಿಂಗಾರಗೊಂಡಿದ್ದವು. ಶವಾಗಾರದಲ್ಲೂ ಕೂಡ ವಿಶೇಷ ಆಯುಧ ಪೂಜೆಯನ್ನು ಸಲ್ಲಿಸಲಾಯಿತು.