ಮಂತ್ರಾಲಯ ಮಠದಲ್ಲಿ ಬಲಿಪಾಡ್ಯಮಿ ವಿಶೇಷ ಪೂಜೆ - Diwali festival celebration 2020
ರಾಯಚೂರು: ಬೆಳಕಿನ ಹಬ್ಬ ದೀಪಾವಳಿ ಹಬ್ಬದ ಬಲಿಪಾಡ್ಯಮಿ ನಿಮಿತ್ತ ಮಂತ್ರಾಲಯದ ಶ್ರೀರಾಘವೇಂದ್ರ ಸ್ವಾಮಿ ಮಠದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು. ಬೆಳಗ್ಗೆ ಎಂದಿನಂತೆ ನಡೆಯುವ ಧಾರ್ಮಿಕ ಪೂಜೆಗಳ ಬಳಿಕ ಬಲಿಪಾಡ್ಯಮಿ ವಿಶೇಷ ಪೂಜೆ ನೆರವೇರಿಸಲಾಯಿತು. ಬಳಿಕ ಪೀಠಾಧಿಪತಿಯಿಂದ ಮೂಲ ದೇವರ ಪೂಜೆ ನೆರವೇರಿಸಿ, ಮೂಲ ಬೃಂದಾವನ ಮಂಗಳಾರತಿ ಮಾಡಿ ಭಕ್ತರಿಗೆ ಆಶೀರ್ವದಿಸಿದರು.