ಅಯೋಧ್ಯೆಯಲ್ಲಿ ರಾಮ ಮಂದಿರಕ್ಕೆ ಅಡಿಗಲ್ಲು: ಹನುಮನಿಗೆ ವಿಶೇಷ ಪೂಜೆ ಸಲ್ಲಿಸಿದ ಬಜರಂಗದಳ ಕಾರ್ಯಕರ್ತರು - Bajrangadala activists
ಚಿಕ್ಕೋಡಿ(ಬೆಳಗಾವಿ): ದೇಶದ ಕೋಟ್ಯಂತರ ಭಕ್ತರ ಪಾಲಿಗೆ ಇಂದು ಐತಿಹಾಸಿಕ ಕ್ಷಣ. ರಾಮನ ಜನ್ಮಭೂಮಿ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಇಂದಿನ ದಿನ ಮುನ್ನುಡಿಯಾಗಿದೆ. ಚಿಕ್ಕೋಡಿ ಉಪವಿಭಾಗದ ವಿವಿಧ ದೇವಸ್ಥಾನಗಳಲ್ಲಿ ರಾಮ, ಹನುಮ ದೇವರಿಗೆ ಹಾಲಿನ ಅಭಿಷೇಕ, ಗಂಧದ ಅಭಿಷೇಕ ಮಾಡಿ ಭಕ್ತರು ಪೂಜೆ ಮಾಡುತ್ತಿದ್ದಾರೆ. ಅದರಲ್ಲೂ ಶ್ರೀರಾಮ ಸೇನೆ ಮುಂಖಡರು ಹಾಗೂ ಸಾರ್ವಜನಿಕರು ವಿಶೇಷ ಪೂಜೆ ಸಲ್ಲಿಸಿದ್ದಾರೆ. ಬಜರಂಗದಳದ ಕಾರ್ಯಕರ್ತರು ರಾಮನ ಬಂಟನಾದ ಹನುಮಂತನಿಗೆ ವಿಶೇಷ ಪೂಜೆ ಮಾಡಿ ರಾಮ ಮಂದಿರ ನಿರ್ಮಾಣಕ್ಕೆ ಯಾವುದೇ ಸಂಕಟ ಬಾರದಿರಲಿ ಎಂದು ಪ್ರಾರ್ಥಿಸಿದರು.