ಬರದ ನಾಡಲ್ಲಿ ಮಳೆರಾಯನ ಆರ್ಭಟ...ತುಂಬಿ ಹರಿಯುತ್ತಿರುವ ಜಲಪಾತಗಳ ದೃಶ್ಯಕ್ಕೆ ಪ್ರವಾಸಿಗರು ಫಿದಾ - ಬಾಗೇಪಲ್ಲಿ
ಸತತ ಬರಗಾಲದಿಂದ ಕೂಡಿರುವ ಜಿಲ್ಲೆಯಲ್ಲಿ ಇದೀಗ ಎಲ್ಲಿ ನೋಡಿದ್ರೂ ನೀರಿನ ರಮಣೀಯ ಮನಮೋಹಕ ದೃಶ್ಯಗಳು ಕಾಣ ಸಿಗುತ್ತವೆ. ಜಲಧಾರೆಗಳಿಂದ ತುಂಬಿ ಎತ್ತರದಿಂದ ಧುಮ್ಮುಕ್ಕುತ್ತಿರುವ ನೀರಿನ ವೈಭವ ನೋಡಲು ಎರಡು ಕಣ್ಣುಗಳು ಸಾಲದು. ಇಂತಹದೊಂದು ಜಲಪಾತ ಬಾಗೇಪಲ್ಲಿ ಬರದ ನಾಡಿನಲ್ಲಿ ಸೃಷ್ಟಿಯಾಗಿದ್ದು, ಬೆಟ್ಟ ಗುಡ್ಡಗಳ ನಡುವೆ ಹರಿಯುತ್ತಿರುವ ನೀರು ಪ್ರವಾಸಿಗರಲ್ಲಿ ಸಂಭ್ರಮವನ್ನುಂಟು ಮಾಡಿದೆ.