ತೆಂಗಿನಕಾಯಿ ತೂರಿ ಭಕ್ತಿ ಮೆರೆಯುವ ಜನ: ಕಾರ್ತಿಕೋತ್ಸವದಂದು ಇಲ್ಲಿ ನಡೆಯುತ್ತೆ ವಿಶೇಷ ಜಾತ್ರೆ - Coconut Nut Fair at Bagalkot
ಜಾತ್ರೆಯ ರಥೋತ್ಸವ ಸಮಯದಲ್ಲಿ ಉತ್ತತ್ತಿ, ಬಾಳೆ ಹಣ್ಣು ತೂರುವುದು ಸಾಮಾನ್ಯ. ಆದ್ರೆ, ತೆಂಗಿನಕಾಯಿ ತೂರುವುದನ್ನು ಎಲ್ಲಿಯಾದರೂ ನೋಡಿದ್ದೀರಾ. ಇಂತಹ ಒಂದು ವಿಶೇಷ ಜಾತ್ರೆ ಬಾಗಲಕೋಟೆ ಜಿಲ್ಲೆಯ ಸೂಳಿಕೇರಿ ಗ್ರಾಮದಲ್ಲಿ ಜರುಗುತ್ತದೆ. ಮಾರುತೇಶ್ವರ ದೇವಾಲಯದ ಕಾರ್ತಿಕೋತ್ಸವ ಅಂಗವಾಗಿ ಇಲ್ಲಿನ ಭಕ್ತರು ತೆಂಗಿನಕಾಯಿ ತೂರುವ ಮೂಲಕ ಹರಕೆ ತೀರಿಸುತ್ತಾರೆ.