ಕರ್ನಾಟಕ

karnataka

ETV Bharat / videos

ರೆಡ್ ಜೋನ್​ನಿಂದ ಗ್ರೀನ್ ಜೋನ್​ಗೆ ಬರುತ್ತಾ ಬಾಗಲಕೋಟೆ?

By

Published : Apr 23, 2020, 8:59 PM IST

ಬಾಗಲಕೋಟೆ : ಜಿಲ್ಲೆಯಲ್ಲಿ ಕಳೆದ ಮೂರು ದಿನಗಳಿಂದ ಕೋವಿಡ್-19 ಸೋಂಕಿತರು ಕಂಡುಬಂದಿಲ್ಲ. ಇದರಿಂದ‌ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ ಕಡಿಮೆ ಆಗುತ್ತಿದ್ದು, ಜಿಲ್ಲೆ ರೆಡ್ ಜೋನ್​ನಿಂದ ಗ್ರೀನ್ ಜೋನ್ ಆಗುವ ಲಕ್ಷಣ ಕಂಡು ಬರುತ್ತಿದೆ. ಈಗಾಗಲೇ ಸೋಂಕಿತ ಇಬ್ಬರು ಗುಣಮುಖರಾಗಿ ಆಸ್ಪತ್ರೆಯಿಂದ‌ ಬಿಡುಗಡೆ ಆಗಿದ್ದಾರೆ. ಇನ್ನೂ ಐದು ಜನರಿಗೆ ಪ್ರಥಮ ಮಾಹಿತಿಯಲ್ಲಿ ನೆಗೆಟಿವ್ ಬಂದಿದ್ದು, ಇನ್ನೊಂದು ಪರೀಕ್ಷೆಯಲ್ಲಿ ನೆಗಟಿವ್ ಬಂದಲ್ಲಿ ಮತ್ತೆ ಐದು ಜನರು ಕೋವಿಡ್ ಆಸ್ಪತ್ರೆಯಿಂದ ಬಿಡುಗಡೆ ಆಗಲಿದ್ದಾರೆ. ಜಿಲ್ಲೆಯಲ್ಲಿ ಮತ್ತೆ 217 ಸ್ಯಾಂಪಲ್​ಗಳ ವರದಿ ಸಹ ನೆಗಟಿವ್ ಬಂದಿದೆ. ಬಾಕಿ 36 ಹಾಗೂ ಹೊಸದಾಗಿ 45 ಸ್ಯಾಂಪಲ್​ಗಳು ಸೇರಿ ಒಟ್ಟು 81 ಸ್ಯಾಂಪಲ್ ವರದಿ ಬರುವಿಕೆಗಾಗಿ ನಿರೀಕ್ಷೆ ಇದೆ. 1,546 ಜನರನ್ನು ಪ್ರತ್ಯೇಕವಾಗಿ ಮನೆಯಲ್ಲಿ ಇರಿಸಲಾಗಿದೆ. ಇಲ್ಲಿಯವರೆಗೆ 1,583 ಜನರ ಸ್ಯಾಂಪಲ್ ಕಳುಹಿಸಲಾಗಿದ್ದು, ಇದರಲ್ಲಿ 1,475 ನೆಗೆಟಿವ್, 21 ಪಾಸಿಟಿವ್ ವರದಿ ಬಂದಿದೆ. ಇದರಲ್ಲಿ ಓರ್ವ ಮೃತ ಪಟ್ಟಿದ್ದಾರೆ. 28 ದಿನಗಳ ವರೆಗೆ ಹೋಮ್ ಕ್ವಾರಂಟೈನ್ ಮುಗಿಸಿ 156 ಜನರನ್ನು ಬಿಡುಗಡೆ ಮಾಡಲಾಗಿದೆ.

ABOUT THE AUTHOR

...view details