ಕೊರೊನಾ ಹಾಟ್ ಸ್ಪಾಟ್ ಬಾಗಲಕೋಟೆ... ಸೋಂಕಿತ ಪ್ರದೇಶದಲ್ಲಿ ಸೀಲ್ಡೌನ್ ಆದೇಶ! - ಬಾಗಲಕೋಟೆ ಲೇಟೆಸ್ಟ್ ನ್ಯೂಸ್
ಬಾಗಲಕೋಟೆ: ಜಿಲ್ಲೆಯು ಕೊರೊನಾ ಹಾಟ್ ಸ್ಪಾಟ್ ಸಿಟಿ ಆಗಿದೆ. ಪೊಲೀಸ್ ಪೇದೆಗೆ ಸೋಂಕು ತಗಲುವ ಮೂಲಕ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 14 ಕ್ಕೆ ಏರಿದೆ. ಈಗಾಗಲೇ ಸೋಂಕಿತ ಪ್ರದೇಶದಲ್ಲಿ ಸೀಲ್ಡೌನ್ ಮಾಡಲಾಗಿದ್ದು, ಸುಮಾರು 25 ಸಾವಿರ ಜನರ ಮೇಲೆ ನಿಗಾ ಇಟ್ಟು ಐವತ್ತು ತಂಡಗಳ ಮೂಲಕ ಮನೆ ಮನೆಗೆ ತೆರಳಿ ಆರೋಗ್ಯ ತಪಾಸಣೆ ಸೇರಿದಂತೆ ಜಾಗೃತಿ ಮೂಡಿಸಲಾಗುತ್ತಿದೆ. ಇಂದು ಇಬ್ಬರಿಗೆ ಸೋಂಕು ಧೃಡಪಟ್ಟಿರುವ ಹಿನ್ನೆಲೆ ಮತ್ತಷ್ಟು ಆತಂಕ ಮೂಡಿಸಿದೆ.