ನೆಲ ಕಚ್ಚಿದ ಬ್ಯಾಡಗಿ ಮೆಣಸಿನಕಾಯಿ ಬೆಳೆ.. ಕಂಗಾಲಾದ ರೈತರು.. - ಹುಬ್ಬಳ್ಳಿ ಬ್ಯಾಡಗಿ ಮೆಣಸಿನಕಾಯಿ ಬೆಳೆ ನಾಶ ಸುದ್ದಿ
ಹುಬ್ಬಳ್ಳಿ:ಕಳೆದ ಮೂರು ತಿಂಗಳುಗಳ ಹಿಂದೆ ಸುರಿದ ಭಾರಿ ಮಳೆ ರೈತರ ಜೀವನದಲ್ಲಿ ಬಿರುಗಾಳಿ ಎಬ್ಬಿಸಿದೆ. ಪ್ರವಾಹ ಬಂದ್ಹೋಗಿ ಹಲವು ದಿನಗಳು ಕಳೆದ್ರೂ ಅನ್ನದಾತರು ಬದುಕು ಕಟ್ಟಿಕೊಳ್ಳಲು ಹೆಣಗಾಡುತ್ತಿದ್ದಾರೆ. ವಿಶ್ವ ಪ್ರಸಿದ್ಧ ಬೆಳೆಯೊಂದು ನೀರಿನಲ್ಲಿ ಕೊಚ್ಚಿ ಹೋಗಿದ್ದು, ರೈತರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ.