ಮಹಾಲಯ ಅಮವಾಸ್ಯೆ: ದಾವಣಗೆರೆಯ ರಾಘವೇಂದ್ರ ಮಠದಲ್ಲಿ ವಿಶೇಷ ಪೂಜೆ - special worship at Raghavendra Math
ದಾವಣಗೆರೆ: ಮಹಾಲಯ ಅಮವಾಸ್ಯೆಯ ಪಿತೃ ಪಕ್ಷದ ಹಿನ್ನೆಲೆ, ನಗರದ ರಾಘವೇಂದ್ರ ಮಠದಲ್ಲಿ ಸಂಕಲ್ಪ ಹಾಗೂ ಪಿಂಡ ಪ್ರಧಾನ ಕಾರ್ಯಕ್ರಮ ನಡೆಯಿತು. ನೂರು ಜನರು ಹಿರಿಯರ ಆತ್ಮಕ್ಕೆ ಶಾಂತಿ ಕೋರಿ ಪಿಂಡ ಪ್ರಧಾನ ನೆರವೇರಿಸಿದರು. ನಗರದ ಕೆ.ಬಿ.ಬಡಾವಣೆಯಲ್ಲಿರುವ ರಾಘವೇಂದ್ರ ಮಠದಲ್ಲಿ ನಿರಂತರವಾಗಿ ನಾಲ್ಕು ಗಂಟೆಗಳ ಕಾಲ ಮಂತ್ರ ಪಠಣದೊಂದಿಗೆ ಪೂಜಾ ವಿಧಿ ವಿಧಾನಗಳು ನಡೆದವು. ಮಹಾಲಯ ಅಮವಾಸ್ಯೆ ಹಿನ್ನೆಲೆಯಲ್ಲಿ ರಾಘವೇಂದ್ರ ಮಠದಲ್ಲಿ ಪ್ರತಿ ವರ್ಷವೂ ವಿಶೇಷ ಪೂಜೆ ನಡೆಸಿಕೊಂಡು ಬರಲಾಗುತ್ತದೆ.