ಸಿದ್ದರಾಮಯ್ಯ, ಕುಮಾರಸ್ವಾಮಿ ಹಾವು ಮುಂಗುಸಿ ಇದ್ದ ಹಾಗೆ: ಬಾಬುರಾವ್ ಚಿಂಚನಸೂರ - ಬಿ.ಸಿ.ಪಾಟೀಲ್ ಪರ ಮತಯಾಚನೆ ಮಾಡಿದ ಬಾಬುರಾವ್ ಚಿಂಚನಸೂರ ಲೆಟೆಸ್ಟ್ ನ್ಯೂಸ್
ಹಾವೇರಿ: ಜಿಲ್ಲೆಯ ರಟ್ಟಿಹಳ್ಳಿಯಲ್ಲಿ ಹಿರೇಕೆರೂರು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಿ.ಸಿ.ಪಾಟೀಲ್ ಪರ ಮಾಜಿ ಸಚಿವ ಬಾಬುರಾವ್ ಚಿಂಚನಸೂರ ಪ್ರಚಾರ ಮಾಡಿದರು. ಸಮಾವೇಶದಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ಹಾಗೂ ಕುಮಾರಸ್ವಾಮಿ ಹಾವು ಮುಂಗುಸಿ ಇದ್ದ ಹಾಗೆ. ಇಪ್ಪತ್ತು ವರ್ಷ ಕಾಂಗ್ರೆಸ್ ಬರೋದಿಲ್ಲ. ಕಾಂಗ್ರೆಸ್ ಸುಟ್ಟುಸುಣ್ಣವಾಗಿದೆ. ಇಲ್ಲಿ ಸಿದ್ದರಾಮಯ್ಯ ಕುದುರೆ ಓಡೋದಿಲ್ಲ. ಓಡೋದು ಯಡಿಯೂರಪ್ಪನ ಕುದುರೆ. ಈ ಬಾರಿ ಬಿ.ಸಿ.ಪಾಟೀಲ್ ಮಂತ್ರಿಯಾಗಿ ಬರ್ತಾರೆ ಎಂದ ಅವರು ಈ ಬಾರಿ ಬಿಜೆಪಿ ಅಭ್ಯರ್ಥಿ ಬಿ.ಸಿ.ಪಾಟೀಲ್ರನ್ನು ಗೆಲಿಸುವಂತೆ ಜನರಲ್ಲಿ ಮನವಿ ಮಾಡಿದರು.