ಒಂದೇ ಕಲಾಕೃತಿಯಲ್ಲಿ ಇರ್ಫಾನ್ ಖಾನ್, ರಿಷಿ ಕಪೂರ್.. ಕಲಾವಿದ ಬಾದಲ್ ನಂಜುಂಡಸ್ವಾಮಿ ಕೈಚಳಕ.. - ಕಲಾವಿದ ಬಾದಲ್ ನಂಜುಂಡಸ್ವಾಮಿ
ಚಿತ್ರ ಒಂದೇ, ಇಬ್ಬರು ಕಲಾವಿದರು.. ಹೌದು. ಒಂದೇ ಚಿತ್ರದಲ್ಲಿ ಇಬ್ಬರು ಸಿನಿಮಾ ದಿಗ್ಗಜ ನಟರ ಚಿತ್ರ ಕಲಾಕೃತಿ ರಚಿಸಿದ್ದಾರೆ ಕಲಾವಿದ ಬಾದಲ್ ನಂಜುಂಡಸ್ವಾಮಿ. ಒಬ್ಬರು ಬಡತನದಿಂದಲೇ ಬೆಳೆದು ಬಂದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರುಗಳಿಸಿ ಇತ್ತೀಚೆಗಷ್ಟೇ ನಮ್ಮನ್ನಗಲಿದ ಕಲಾವಿದ ಇರ್ಫಾನ್ ಖಾನ್. ಮತ್ತೊಂದೆಡೆ ನೋಡಿದ್ರೆ, ನೂರಾರು ಸಿನಿಮಾಗಳನ್ನು ಮಾಡಿ ಹಿಂದಿ ಸಿನಿಮಾ ರಂಗದ ಲೆಜೆಂಡ್ ಎನಿಸಿಕೊಂಡ ಖ್ಯಾತ ನಟ ದಿವಂಗತ ರಿಷಿ ಕಪೂರ್ ಅವರ ಚಿತ್ರ. ಸದಾ ಪ್ರಸ್ತುತ ಘಟನೆಗಳಿಗೆ ತಮ್ಮ ಕಲೆಯ ಮೂಲಕ ಸ್ಪಂದಿಸುವ ಬಾದಲ್ ನಂಜುಂಡಸ್ವಾಮಿಯವರ ಕಲೆಗಳು ವಿಶ್ವಮಟ್ಟದಲ್ಲಿ ಹೆಸರು ಗಳಿಸುತ್ತಿವೆ. ಲಾಕ್ಡೌನ್ನಲ್ಲಿ ಸಾಕಷ್ಟು ಕ್ರಿಯೇಟಿವ್ ಚಿತ್ರಗಳ ಮೂಲಕ ಗಮನ ಸೆಳೆದಿದ್ದರು. ಇದೀಗ ಭಾರತೀಯ ಚಿತ್ರರಂಗವನ್ನು ತೊರೆದ ಅಪಾರ ಅಭಿಮಾನಿಗಳ ನೆಚ್ಚಿನ ನಟರಿಬ್ಬರ ಅಂದವಾದ ಚಿತ್ರ ಬರೆದು ಮನಸೂರೆಗೊಂಡಿದ್ದಾರೆ.