ಪುಸ್ತಕದಲ್ಲಿ 3D ಪೇಂಟಿಂಗ್: ನಿತ್ಯೋತ್ಸವ ಕವಿಗೆ ಕಲಾವಿದ ಬಾದಲ್ ನಂಜುಂಡಸ್ವಾಮಿ ನಮನ - ಬಾದಲ್ ನಂಜುಡಸ್ವಾಮಿ ಚಿತ್ರ
ಇತ್ತೀಚೆಗಷ್ಟೇ ಅಗಲಿದ ಕನ್ನಡದ ಹಿರಿಯ ಕವಿ ಪ್ರೊ.ಕೆ.ಎಸ್.ನಿಸಾರ್ ಅಹಮದ್ ಅವರಿಗೆ ಕಲಾವಿದ ಬಾದಲ್ ನಂಜುಂಡಸ್ವಾಮಿ ವಿಶೇಷ ನಮನ ಸಲ್ಲಿಸಿದ್ದಾರೆ. 3ಡಿ ಪೇಂಟಿಂಗ್ ಮೂಲಕ ಗುಂಡಿಬಿದ್ದ ರಸ್ತೆ ಮೇಲೆ ಚಂದ್ರಯಾನ ಮಾಡಿ ಸರ್ಕಾರಕ್ಕೆ ಚಾಟಿ ಬೀಸಿದ್ದ ಅವರು, ಈಗ ಪುಸ್ತಕದಲ್ಲಿ ನಿತ್ಯೋತ್ಸವ ಕವಿಯ 3ಡಿ ಚಿತ್ರ ಬಿಡಿಸಿದ್ದಾರೆ. ಈ ಅಪರೂಪದ ಪೇಂಟಿಂಗ್ ಇದೀಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.